ಜಲ ನಿರೋಧಕ ಹಾಳೆ ಅಳವಡಿಸಿ ನೀರು ಸಂಗ್ರಹ

23 KAMPLI 03
ಕಂಪ್ಲಿ ತಾಲೂಕಿನ ಜವುಕು ಗ್ರಾಮದಲ್ಲಿ ಕುಡಿವ ನೀರಿನ ಕೆರೆ ಅಭಿವೃದ್ಧಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪಿಡಿಒ ಬೀರಲಿಂಗ, ಪ್ರಮುಖರಾದ ಕೆ.ಶ್ರೀನಿವಾಸರಾವ್, ರಾಜನಗೌಡ, ಹಾಲ್ವಿ ಕುಮಾರಸ್ವಾಮಿ, ಶೇಷಮ್ಮ, ಎನ್.ಮಲ್ಲಿಕಾರ್ಜುನ ಇತರರಿದ್ದರು.
Published on

ಕಂಪ್ಲಿ: ಜೆಜೆಎಂ ಯೋಜನೆಯಡಿ 9.94ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಜವುಕು ಹಾಗೂ ಇತರ ಎರಡು ಗ್ರಾಮಗಳಿಗೆ ಕುಡಿವ ನೀರಿನ ಕೆರೆ, ಪೈಪ್‌ಲೈನ್, ನಳ ಅಳವಡಿಕೆ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಸೋಮವಾರ ಚಾಲನೆ ನೀಡಿದರು.

ಈ ಕೆರೆಯಲ್ಲಿ ನೀರು ನಿಲ್ಲದ್ದರಿಂದ ಬಳಕೆ ಮಾಡುತ್ತಿರಲಿಲ್ಲ. ಗ್ರಾಮಸ್ಥರ ಬೇಡಿಕೆಯಂತೆ ಆಧುನಿಕ ತಂತ್ರಜ್ಞಾನ ಬಳಸಿ ಕೆರೆ ಅಭಿವೃದ್ಧಿ ಪಡಿಸಲಾಗುವುದು. ಕೆರೆ 10 ಎಕರೆ ವಿಸ್ತೀರ್ಣ ಹೊಂದಿದ್ದು, 350 ಕಿ.ಲೀ. ಸಂಗ್ರಹ ಸಾಮರ್ಥ್ಯವಿದೆ. ಕೆರೆಗೆ ನಿತ್ಯ 6,53,598 ಲೀಟರ್ ನೀರು ಸರಬರಾಜಿನ ಅಗತ್ಯವಿದೆ.

ತಳಕ್ಕೆ ಜಿಯೋಮೆಂಬ್ರೇನ್ (ಜಲ ನಿರೋಧಕ ಹಾಳೆ) ಶೀಟ್ ಅಳವಡಿಸಿ ನೀರು ಸಂಗ್ರಹಿಸಲಾಗುವುದು. ಸಹಜವಾಗಿ ಹರಿಯುವ ನೀರಿನ ಮೂಲಗಳಿಲ್ಲದಿದ್ದರಿಂದ ಎಲ್.ಎಲ್ ಕಾಲುವೆಯಿಂದ ಕೆರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.

ವಸತಿ ಯೋಜನಡಿ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರಾದ ಶೇಷಮ್ಮ, ಪಾರ್ವತಿ, ಲಕ್ಷ್ಮೀ ಪಕ್ಕೀರಪ್ಪ, ಮಂಜಮ್ಮ, ರಾಜಪ್ಪ, ಯಂಕಮ್ಮ, ಯಲ್ಲಮ್ಮ ಶಾಸಕರನ್ನು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯೆಸಿದ ಶಾಸಕ ಗಣೇಶ್, ಬಸವ ವಸತಿ ಯೋಜನೆ, ಎಸ್ಸಿ ಎಸ್ಟಿ ಸೇರಿ ನಾನಾ ಯೋಜನಡಿ ಗ್ರಾಪಂ.ಗೆ 200 ಮನೆಗಳಂತೆ ಬರಲಿವೆ.

ಇದಕ್ಕಾಗಿ ಸರ್ವೇ ನಡೆಸಿ ಅರ್ಹ ಲಾನುಭವಿಗಳನ್ನು ಗುರುತಿಸಲಾಗುವುದು. ಮಧ್ಯವರ್ತಿಗಳನ್ನು ಅವಲಂಬಿಸಿ ಹಣ ಕಳೆದುಕೊಳ್ಳಬಾರದು. ಕುರುಗೋಡಿನಲ್ಲಿ 16 ಎಕರೆ ಜಾಗ ಖರೀದಿಸಿದ್ದು ಜಿ ಪ್ಲಸ್ 1 ಮಾದರಿಯಲ್ಲಿ 1400 ಮನೆಗಳನ್ನು ನಿರ್ಮಿಸಲಾಗುವುದು. ಕಂಪ್ಲಿ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕದ 11ಎಕರೆ ಜಾಗವಿದ್ದು, ಘಟಕ ಸ್ಥಳಾಂತರಿಸಿ ಅಲ್ಲಿ ಜಿಪ್ಲಸ್ 1 ಮಾದರಿಯ ಮನೆ ನಿರ್ಮಿಸಿ ವಿತರಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪಿಡಿಒ ಬೀರಲಿಂಗ, ಪ್ರಮುಖರಾದ ರಾಜನಗೌಡ, ಹಾಲ್ವಿ ಕುಮಾರಸ್ವಾಮಿ, ಬಸವರಾಜ, ಎನ್.ಮಲ್ಲಿಕಾರ್ಜುನ, ಜೆ.ಜಡೆಪ್ಪ, ಎಚ್.ಎಂ.ರಾಮಲಿಂಗಯ್ಯಸ್ವಾಮಿ, ಪೂಜಾರ್ ಆಂಜನೇಯ, ಶಿವನಗೌಡರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net