

-ಹತ್ತು ದಿನಗಳಿಂದ ನೀರು ಬಿಡುವುದನ್ನೇ ಮರೆತ ಸಿಬ್ಬಂದಿ
ಬೆಳಗಾವಿ: ಯರಗಟ್ಟಿ ಪಟ್ಟಣದ ಅರ್ಧ ಭಾಗಕ್ಕೆ ಹತ್ತು ದಿನಗಳಿಂದ ಕುಡಿಯುವ ನೀರು ಸಂಪೂರ್ಣ ಸ್ಥಗೀತಗೊಂಡಿದೆ.
ನವೀಲುತೀರ್ಥ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಿಬ್ಬಂದಿ ನಿರ್ಲಕ್ಷ್ಯ ದಿಂದಾಗಿ ಯರಗಟ್ಟಿ ಪಟ್ಟಣದ ಅರ್ಧ ಭಾಗಕ್ಕೆ ಕುಡಿಯುವ ನೀರು ಬಂದ್ ಆಗಿದೆ. ಇದೇ ಪೈಪಲೈನ್ ಮಾರ್ಗ ಅವಲಂಬಿಸಿರುವ ಗ್ರಾಮಗಳಿಗೆ ದಿನದ 24 ಗಂಟೆ ಪೂರೈಕೆಯಾಗುತ್ತಿದೆ. ಆದರೆ, ಯರಗಟ್ಟಿ ಅರ್ಧ ಭಾಗಕ್ಕೆ ಕುಡಿಯುವ ನೀರು ಎಂಬುದು ಮರೀಚಿಕೆಯಾಗಿದೆ. ನೀರು ಬರುತ್ತಿಲ್ಲ ಎಂದು ಸಿಬ್ಬಂದಿ, ಅಧಿಕಾರಿಗಳನ್ನು ಕೇಳಿದರೆ ಜಲಾಶಯದಲ್ಲಿ ಪಂಪ್ ಸೆಟ್ ಗಳ ಸಮಸ್ಯೆ ಎಂದು ಎಂದು ಹೇಳುತ್ತಿದ್ದಾರೆ.ಪಟ್ಟಣ ಪಂಚಾಯತಿ ಸಿಬ್ಬಂದಿ, ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿಯೇ ಸಮಸ್ಯೆಗೆ ಮೂಲ ಕಾರಣ ಎಂದು ನಿವಾಸಿಗಳು ದೂರಿದ್ದಾರೆ.