ಪುತ್ತೂರು: ನಗರಸಭೆಯ ನೀರಿನ ವ್ಯವಸ್ಥೆಯನ್ನು ಜಲಸಿರಿಗೆ ಹಸ್ತಾಂತರಿಸಿದ ಬಳಿಕ ಪಂಪ್ ಆಪರೇಟರ್‌ಗಳನ್ನು ಕೈಬಿಡಲಾಗಿದ್ದು, ನಗರದೆಲ್ಲೆಡೆ ಇದರಿಂದ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ೨೭೪ ಕೊಳವೆಬಾವಿಗಳ ನಿರ್ವಹಣೆಗೆ ಈ ಹಿಂದೆ ಇದ್ದ ೩೧ ಪಂಪ್ ಆಪರೇಟರ್‌ಗಳನ್ನು ಮರು ನಿಯೋಜನೆಗೊಳಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ನಗರಸಭೆ ಹಾಗೂ ಜಲಸಿರಿ ಅಽಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್.ಮಹಮ್ಮದಾಲಿ ಎಚ್ಚರಿಸಿದ್ದಾರೆ.
ಜಲಸಿರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನೀರಿನ ಸಮಸ್ಯೆಯ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ನಗರಸಭೆ ನೀರು ಸರಬರಾಜು ನಿರ್ವಹಣೆಯನ್ನು ಸುಯೇಜು ಕಂಪನಿ(ಜಲಸಿರಿ)ಯವರಿಗೆ ಟ್ರಯಲ್‌ಗೆ ನೀಡಿದ್ದು, ಜಲಸಿರಿಯವರು ೧೭೦ ಕೊಳವೆಬಾವಿಗಳ ನೀರು ಒದಗಿಸುವ ನಿರ್ವಹಣೆ ಮಾಡುತ್ತಿದ್ದ ೩೧ ಆಪರೇಟರ್‌ಗಳನ್ನು ಕೈಬಿಟ್ಟು ನಾಲ್ಕೈದು ಪಂಪ್ ಆಪರೇಟರ್‌ಗಳನ್ನು ಬಳಸಿಕೊಂಡು ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದಾಗಿ ನಗರಸಭೆಯ ಯಾವುದೇ ಜೋನ್‌ಗಳಿಗೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಅಲ್ಲದೆ ಜಲಸಿರಿಯ ಹೊಸ ಯೋಜನೆಯಿಂದಲೂ ನೀರು ವಿತರಣೆ ಆಗುತ್ತಿಲ್ಲ. ಜನರಿಗೆ ಅತ್ತ ಕೊಳವೆಬಾವಿ ಇತ್ತ ಜಲಸಿರಿ ಯೋಜನೆ ಎರಡರಿಂದಲೂ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಹಿಂದಿನ ಶಾಸಕರು ಮತ್ತು ನಗರಸಭೆಯ ಆಡಳಿತದಿಂದ ಆಗಿರುವ ಎಡವಟ್ಟು ಇದಕ್ಕೆಲ್ಲಾ ಕಾರಣವಾಗಿದೆ. ನೀರಿನ ಸಮಸ್ಯೆಗೆ ಕಾರಣವಾದ ಸಂಬಂಽಸಿದ ಅಽಕಾರಿಗಳು, ಡಿಪಿಆರ್ ಮಾಡಿದವರು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ರಿಯಾಝ್ ಪರ್ಲಡ್ಕ, ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ, ನಗರ ಕಾಂಗ್ರೆಸ್ ಮುಖಂಡ ವಿಕ್ಟರ್ ಪಾಯಸ್ ಉಪಸ್ಥಿತರಿದ್ದರು.