

ಕಾರವಾರ: ಕಿನ್ನರ ಗ್ರಾಪಂ ವ್ಯಾಪ್ತಿಯ ಅಂಬೆಜೂಗಕ್ಕೆ ನೀರಿನ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಿನ್ನರ ಗ್ರಾಮದಲ್ಲಿ 40 ಮನೆಗಳಿದ್ದು, ತಿಂಗಳಿಂದ ಕುಡಿಯುವ ನೀರು ಪೂರೈಕೆಯನ್ನು ಕೆರವಡಿ ಬಹುಗ್ರಾಮ ಯೋಜನೆಯಿಂದ ನಿಲ್ಲಿಸಲಾಗಿದೆ.
ತಾಪಂ ಅಧಿಕಾರಿಗಳ ಬಳಿ ಮನವಿ ಮಾಡಿದ್ದಕ್ಕೆ ಪಿಡಿಒ ಸಿಟ್ಟಿಗೆದ್ದು, 4 ಕಿಮೀ ಹಿಂದೆ ಟ್ಯಾಂಕರ್ ನಿಲ್ಲಿಸಿ, ಅಲ್ಲಿಂದ ಕೊಡದ ಮೇಲೆ ನೀರು ಹೊತ್ತೊಯ್ಯುವಂತೆ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಗೋಳು ಹೇಳಿಕೊಂಡರು.ಕರವೆ ಅಧ್ಯಕ್ಷ ರಾಜೇಶ ನಾಯ್ಕ ಇದ್ದರು.