ಜಲ ವಿಮಾನ ಪ್ರವಾಸೋದ್ಯಮ ಸ್ಥಳ ಪರಿಶೀಲನೆ

20-10-24----krs1 (5)
Published on
  • ಕೆ.ಆರ್.ಸಾಗರ : ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ಜಲ ವಿಮಾನ ಪ್ರವಾಸೋದ್ಯಮ ಆರಂಭಿಸುವ ಸಲುವಾಗಿ ರಾಜ್ಯ ಜಲಸಾರಿಗೆ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ನೇತೃತ್ವದ ತಂಡ ಭಾನುವಾರ ಸಂಜೆ ಕೆ.ಆರ್.ಎಸ್ ಹಿನ್ನೀರಿನಲ್ಲಿ ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಿದರು.

  • ತಾರನಾಥ್.ಎಸ್.ರಾಥೋಡ್ ನೇತೃತ್ವದಲ್ಲಿ ಜಲವಿಮಾನ ಸಾರಿಗೆ ತಂತ್ರಜ್ಞ ಕಮ್ರೂನ್ ಹುಸೇನ್ ತಂಡ ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನಿರಿನ ವೇಣುಗೋಪಾಲ ದೇವಸ್ಥಾನ ಸಮೀಪ ಹಾಗೂ ಆನಂದೂರು ಗ್ರಾಮದ ಬಳಿಯ ಸ್ಥಳಕ್ಕೆ ಬೋಟ್ ಮೂಲಕ ತೆರಳಿ ಪರಿಶೀಲನೆ ಮಾಡಿತು. ನೀರಿನ ಪ್ರಸ್ತುತ ಸ್ಥಿತಿ, ಆಳ, ಉದ್ದ, ಜಲ ಸಾರಿಗೆಗೆ ಬೇಕಾದ ತಾಂತ್ರಿಕ ಸೌಕರ್ಯದ ಬಗ್ಗೆ ಕೆ.ಅರ್.ಸಾಗರ ಅಣೆಕಟ್ಟೆಯ ಕಾವೇ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಅವರಿಂದ ಮಾಹಿತಿ ಪಡೆದರು.
  • ಈ ವೇಳೆ ಮಾತನಾಡಿದ ತಾರನಾಥ್.ಎಸ್.ರಾಥೋಡ್, ಒಂದು ನದಿಯಿಂದ ಮತ್ತೊಂದು ನದಿಗೆ ಲಘು ವಿಮಾನ ಜಲದ ಮೇಲೆ ಇಳಿಯುವುದೇ ಜಲ ವಿಮಾನಯಾನವಾಗಿದೆ. ಈ ವಿಮಾನ ನದಿಯಲ್ಲಿ ನಿರ್ಮಿಸಿರುವ ಜಟ್ಟಿಯಲ್ಲಿ (ರನ್ ವೇ) ಇಳಿಯುತ್ತದೆ ಹಾಗೂ ಸಮೀಪ ಏರ್ ಪೋರ್ಟ್‌ಗಳಲ್ಲಿ ಕೂಡ ವಿಮಾನ ಇಳಿಸಬಹುದಾಗಿದೆ. ಈ ವಿಮಾನಗಳು ಎರಡು ರೀತಿಯಲ್ಲಿ ಇಳಿಯುತ್ತದೆ. ಈ ಜಾಗದಲ್ಲಿ ಯಾವುದೇ ಪರಿಸರ ಮಾಲಿನ್ಯ ಉಂಟಗುವುದಿಲ್ಲ. ಇದಕ್ಕೆ 1.5 ಕಿ.ಮೀ ಉದ್ದ, 10 ಅಡಿ ಆಳದ ಅವಶ್ಯಕತೆ ಇದ್ದು, ಈ ಯೋಜನೆ ವಿದೇಶದಲ್ಲಿ ಈಗಾಗಲೇ ಯಶಸ್ವಿಯಾಗಿದೆ ಎಂದರು.
  • ನಮ್ಮ ರಾಜ್ಯದಲ್ಲಿ ನ.10 ರಂದು ಪ್ರಥಮವಾಗಿ 19 ಪ್ರವಾಸಿಗರು ಇರುವ ಜಲವಿಮಾನ ಕೆ.ಆರ್.ಸಾಗರ ಹಿನ್ನೀರಿನಲ್ಲಿ ಇಳಿಯಲಿದೆ. ಈ ಕಾರಣದಿಂದ ಜಲವಿಮಾನ ಇಳಿಯುವ ಸ್ಥಳ ಹಾಗೂ ತಾಂತ್ರಿಕ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು.ಕಾ.ನೀ.ನಿಗಮದ ಇಂಜಿನಿಯರ್ ಸುರೇಶ್ ಬಾಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net