ಕದ್ರಾ ಅಣೆಕಟ್ಟೆಯಿಂದ ನೀರು ಹೊರಕ್ಕೆ

Kadra-Dam
Published on


ಕಾರವಾರ: ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯ ಭರ್ತಿಗೂ ಮುಂಚೆ ಕದ್ರಾ ಅಣೆಕಟ್ಟೆಯಿಂದ ಶುಕ್ರವಾರ ನೀರು ಹೊರಬಿಡಲಾಯಿತು.

ಕದ್ರಾ ಅಣೆಕಟ್ಟೆಗೆ 19676 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯಲ್ಲಿ ಗರಿಷ್ಠ 34.50 ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯವಿದೆ. ಆದರೆ, ಪ್ರವಾಹದಿಂದ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಗರಿಷ್ಠ 31 ಮೀಟರ್ ಮಾತ್ರ ನೀರನ್ನು ಸಂಗ್ರಹಿಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಹಾಗಾಗಿ ಶುಕ್ರವಾರ ಮಧ್ಯಾಹ್ನ 4 ಗೇಟ್‌ಗಳನ್ನು ತೆರೆದು 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು. ಅಲ್ಪ ನೀರು ಹೊರ ಬಿಟ್ಟಿದ್ದರಿಂದ ಅಣೆಕಟ್ಟೆಯ ಎದುರಿನ ಬ್ರಿಜ್ ನಲ್ಲಿ ವಾಹನ ಸಂಚಾರ ಎಂದಿನಂತೆ ಇತ್ತು.
ಶುಕ್ರವಾರ ವಿದ್ಯುತ್ ಉತ್ಪಾದನೆ ಮಾಡಿ 22 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ಗೇಟ್‌ನ 6 ಸಾವಿರ ಸೇರಿ ಒಟ್ಟು 28 ಸಾವಿ ಕ್ಯೂಸೆಕ್ ನೀರು ಕಾಳಿ ನದಿಗೆ ಹರಿಯುತ್ತಿದೆ. ಕಾಳಿ ನದಿ ದಂಡೆಯಲ್ಲಿ ಸದ್ಯ ಪ್ರವಾಹದ ಭೀತಿ ಇಲ್ಲ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 1 ಮನೆಗೆ ತೀವ್ರ ಮತ್ತು 3 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಸೂಪಾ ಅಣೆಕಟ್ಟೆಗೆ 25 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಕೊಡಸಳ್ಳಿಗೆ 8 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net