ಬ್ಯಾಡಗಿ ತಾಲೂಕಿನ ಕೆರೆಗಳಿಗೆ ಜೂನ್​ನಲ್ಲಿ ನೀರು

5byd1
Published on

ಬ್ಯಾಡಗಿ: ಅಸುಂಡಿ, ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಬೃಹತ್ ಯೋಜನೆ ಕಾಮಗಾರಿ ಶೇ. 75ರಷ್ಟು ಪೂರ್ಣಗೊಂಡಿದೆ. ಜೂನ್​ನಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಪಂ, ಅಂಗನವಾಡಿ, ತ್ಯಾಜ್ಯ ವಿಲೇವಾರಿ ಘಟಕ, ವಾಲ್ಮೀಕಿ ಭವನ, ಶಾಲೆ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾಲೂಕಿನ ಸಮಗ್ರ ಕೆರೆಗಳ ನೀರಾವರಿ ಯೋಜನೆಗೆ 362 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಆಣೂರು ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರಾತಿ ಹಂತದಲ್ಲಿದೆ. ಮುಖ್ಯಮಂತ್ರಿಗಳು ಕೆರೆ ಕಾಮಗಾರಿಗೆ ಹೆಚ್ಚುವರಿಯಾಗಿ 12 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ತಾಲೂಕಿನ ವಿವಿಧ ಕೆರೆಗಳನ್ನು ತುಂಬಿಸಲು ಒಟ್ಟು 412 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು.

ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ತಾಲೂಕಿಗೆ ಪ್ರಸಕ್ತ ಸಾಲಿನಲ್ಲಿ ವರದಾ ಹಾಗೂ ತುಂಗಭದ್ರಾ ನದಿ ಮೂಲಕ ಕೆರೆಗಳಿಗೆ ನೀರು ಒದಗಿಸಿಕೊಟ್ಟ ಶಾಸಕರು ಇನ್ನಷ್ಟು ಯೋಜನೆ ತರಲಿ ಎಂದರು.

ಸಂಗೂರು ಸಕ್ಕರೆ ಕಾರ್ಖಾನೆ ಸಹಕಾರಿ ಸಂಘದ ನಿರ್ದೇಶಕ ಚಂದ್ರಪ್ಪ ಮುಚ್ಚಟ್ಟಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮಲವ್ವ ಕಾಕೋಳ ಅಧ್ಯಕ್ಷತೆ ವಹಿಸಿದ್ದರು. ಅಂಬಿಗರ ಚೌಡಯ್ಯ ನಿಗಮ ನಿರ್ದೇಶಕ ಜಿತೇಂದ್ರ ಸುಣಗಾರ, ಜಿಪಂ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಜಿಪಂ ಮಾಜಿ ಸದಸ್ಯ ಶಂಕ್ರಪ್ಪ ಮಾತನವರ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ಗ್ರಾಪಂ ಉಪಾಧ್ಯಕ್ಷ ದ್ಯಾಮಪ್ಪ ಪೂಜಾರ, ಶೇಖರಗೌಡ ಗೌಡ್ರ, ಹೇಮಪ್ಪ ಶೆಟ್ಟರ, ಶೋಭಾ ಮಾಳಗಿ, ನೇತ್ರಾವತಿ ದೊಡ್ಡಮನಿ, ಮಲ್ಲಪ್ಪ ಕಡೇಮನಿ, ಇಂಜಿನಿಯರ್ ಎಚ್.ಡಿ. ಶಾಂತಕುಮಾರ ಇತರರಿದ್ದರು.

ಶಿಕ್ಷಕ ಪ್ರಕಾಶ ಕೊರಮರ, ಎಸ್.ಬಿ. ಹಣಗಿ, ಎ.ಬಿ. ತಳಮನಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net