

ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಕೆರೆಗೆ ನದಿಮೂಲದಿಂದ ನೀರು ಹರಿಸಲಾಗಿದೆ. ಕಳೆದ ವಾರ ತಾಲೂಕಿನ ಬೇಗೂರು ಹೋಬಳಿಯ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ಮಹಾದೇವಪ್ಪ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಕಮರಹಳ್ಳಿ ಕೆರೆಯ ಪಂಪ್‌ಹೌಸ್ ಬಳಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಮಹೇಶ್ ಒಂದು ವಾರದೊಳಗೆ ನೀರು ಬಿಡುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿತ್ತು. ಭರವಸೆಯಂತೆ ಇದೀಗ ಕೆರೆಗಳಿಗೆ ನೀರು ಬಿಡಲಾಗಿದೆ. ಮಾಡ್ರಹಳ್ಳಿ ಕೆರೆ ರೀತಿಯಲ್ಲಿ ಇನ್ನಿತರ ಕೆರೆಗಳಿಗೂ ನೀರು ಬಿಡುವಂತೆ ಜಿಲ್ಲಾಡಳಿತಕ್ಕೆ ರೈತ ಮುಖಂಡ ಮಾಡ್ರಹಳ್ಳಿ ಮಹದೇವಪ್ಪ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.