ನದಿ ಮೂಲದಿಂದ ಕೆರೆಗಳಿಗೆ ನೀರು

18-GPT-3
ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನದಿ ಮೂಲದಿಂದ ನೀರು ಹರಿಸಲಾಗುತ್ತಿದೆ.
Published on

ಗುಂಡ್ಲುಪೇಟೆ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶುಕ್ರವಾರ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ಹರಿಸಲಾರಂಭಿಸಿದ್ದು, ತಾಲೂಕಿನ ರೈತರಿಗೆ ಸಂತಸ ತಂದಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ತಾಲೂಕಿನ ಹಲವಾರು ಕೆರೆಗಳು ಕೋಡಿ ಬಿದ್ದಿದ್ದರೂ ದೊಡ್ಡ, ದೊಡ್ಡ ಕೆರೆಗಳು ತುಂಬದೆ ರೈತರಲ್ಲಿ ನಿರಾಶಯುಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ನದಿಗೆ ಹೆಚ್ಚುವರಿ ನೀರು ಹರಿಸುವ ಸಂದರ್ಭದಲ್ಲಿಯೇ ಕೆರೆಗಳನ್ನು ತುಂಬಿಸುವಂತೆ ರೈತರು ಒತ್ತಾಯಿಸಿದ್ದರು.

ಅಲ್ಲದೆ ಕಳೆದ ತಿಂಗಳು ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಾಲೂಕಿನ ತೆರಕಣಾಂಬಿ ಹೋಬಳಿಯ ಹುತ್ತೂರು ಕೆರೆಯಿಂದ ನೆರೆಯ ವಡ್ಡಗೆರೆಗೆ ನೀರು ಹರಿಸಿದ್ದಾರೆ. ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು ವಡ್ಡಗೆರೆಗೆ ತೆರಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ತಮ್ಮ ಮೊಬೈಲುಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಒಂದೆರಡು ತಿಂಗಳು ನೀರು ಹರಿಸುವುದರಿಂದ ಕರಕಲಮಾದಹಳ್ಳಿ, ಯರಿಯೂರು, ದಾರಿಬೇಗೂರು, ಕೊಡಸೋಗೆ, ಬೊಮ್ಮಲಾಪುರ, ಕಲ್ಲುಕಟ್ಟೆ ಜಲಾಶಯಗಳು ತುಂಬಲಿವೆ. ಇವುಗಳುಕೋಡಿ ಬಿದ್ದರೆ ಗುಂಡ್ಲುಪಾತ್ರದಲ್ಲಿ ನೀರು ಹರಿಯಲಿದೆ. ಆದ್ದರಿಂದ ನಿಗಮದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮೋಟಾರು ಬಂದ್ ಮಾಡಬಾರದು ಎಂದು ಮುಖಂಡರಾದ ವಡ್ಡಗೆರೆ ನಾಗಪ್ಪ, ಕೆ.ಎಂ.ಪ್ರಭುಸ್ವಾಮಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net