ನೀರು ಪೂರೆಕೆಗಾಗಿ ಪುರಸಭೆಗೆ ಮುತ್ತಿಗೆ

Protest
Published on

ಸವದತ್ತಿ: ಪಟ್ಟಣದ ಕವಲಪೇಟ ಓಣಿ, ಕುಂಬಾರ ಓಣಿ, ಗಿರಿಜನ್ನವರ ಓಣಿ ಸೇರಿ ಹಲವು ವಾರ್ಡ್​ಗಳಿಗೆ 8 ದಿನಗಳಿಗೊಮ್ಮೆ ನೀರು ಪೂರೆಸಲಾಗುತ್ತಿದೆ. ಈ ವಿಚಾರ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಕ್ಕದಲ್ಲಿಯೇ ಮಲಪ್ರಭಾ ನದಿಯಿದ್ದು, ಪಟ್ಟಣದ ಜನರಿಗೆ ಸುಮಾರು 8 ದಿನಗಳಿಗೊಮ್ಮೆ ನೀರು ಪೂರೆಸಲಾಗುತ್ತಿದೆ. ನೀರು ಪಾಳೆಯಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ. ಪುರಸಭೆಯಿಂದ ಚರಂಡಿ ಸ್ವಚ್ಛತೆ ಕೂಡ ಸರಿಯಾಗಿ ಮಾಡಲಾಗುತ್ತಿಲ್ಲ. ಬಡಾವಣೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಎರಡು ದಿನದೊಳಗಾಗಿ ಬಗೆಹರಿಸದಿದ್ದರೆ ಮರಳಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಬಡಾವಣೆಯ ನಿವಾಸಿಗಳು ಎಚ್ಚರಿಸಿದ್ದಾರೆ.

ಪುರಸಭೆ ಎಇಇ ಶಂಕರ ದಂಡಿನ ಮಾತನಾಡಿ, ವಿದ್ಯುತ್​ ಸಮಸ್ಯೆಯಿಂದ ನೀರು ಪೂರೆಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇಂದು ಕೂಡ 4 ಗಂಟೆ ವಿದ್ಯುತ್​ ಸ್ಥಗಿತವಾಗಲಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವದು ಎಂದರು.

ಮುಖಂಡರಾದ ರಾಜು ಪಟ್ಟಣಶೆಟ್ಟಿ, ಮಹಾಂತೇಶ ಅಮಿನಬಾವಿ, ಬಸವರಾಜ ಹಂಪಣ್ಣವರ, ಅರುಣ ಅಮಿನಬಾವಿ, ಸೋಮನಿಂಗಯ್ಯ ವಡೆಯರ, ಗಿರೀಶ ರಂಗಣ್ಣವರ, ಮಲ್ಲಿಕಾರ್ಜುನ ಕಲಾದಗಿ, ಬಸವರಾಜ ಬಾಳಿ, ಪ್ರಕಾಶ ಸಾಲೋಣಿ, ಪ್ರಕಾಶ ಪಟ್ಟಣಶೆಟ್ಟಿ, ಗಂಗಪ್ಪ ಬೋಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net