ವಿಎಕೆ ಫೌಂಡೇಷನ್ ನಿಂದ ನೀರಿನ ವ್ಯವಸ್ಥೆ

IMG-20240512-WA0006-1.jpg
Published on

ಹುಬ್ಬಳ್ಳಿ: ನಗರದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅನುಕೂಲ ಕಲ್ಪಿಸುವ ಸಲುವಾಗಿ ಹುಬ್ಬಳ್ಳಿಯ ವಿಎಕೆ ಫೌಂಡೇಷನ್ ವತಿಯಿಂದ ಇತ್ತೀಚೆಗೆ ಕುಡಿಯುವ ನೀರಿನ ಅರವಟಿಕೆ ಅಳವಡಿಸಲಾಗಿದೆ.

ಇಲ್ಲಿನ ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನ ಮುಂಭಾಗದಲ್ಲಿ ಅರವಟಿಗೆ ಇಡಲಾಗಿದೆ. 20ರಿಂದ 25 ಲೀಟರ್ ನೀರು ಸಂಗ್ರಹದ ಹೊಸ ಮಣ್ಣಿನ ಮಡಕೆ ಹಾಗೂ ಕುಡಿಯುವ ನೀರಿನ ಗ್ಲಾಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಬಾಯಾರಿ ಬಂದ ಜನರು ಇಲ್ಲಿ ನೀರು ಕುಡಿದು ಒಂದಿಷ್ಟು ನೆಮ್ಮದಿ ಪಡೆಯುತ್ತಿದ್ದಾರೆ. ಬಿಸಿಲು ಹೆಚ್ಚು ಇರುವುದರಿಂದ ಕೆಲಸಕ್ಕಾಗಿ ಬರುವ ಜನರಿಗೆ ಇದು ಬಹಳ ಅನುಕೂಲವಾಗಿದೆ.

ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ವಿಎಕೆ ಫೌಂಡೇಷನ್ ಶುದ್ಧ ತಂಪಾದ ಕುಡಿಯುವ ನೀರನ್ನು ವಿತರಿಸುವ ಸಂಕಲ್ಪದೊಂದಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ಹೇಳಿದರು.

ಕುಡಿಯುವ ನೀರಿನ ವ್ಯವಸ್ಥೆ ವೀಸಿದ ಶಾಸಕ ಮಹೇಶ ಟೆಂಗಿನಕಾಯಿ ಅವರು, ವೆಂಕಟೇಶ್ ಕಾಟವೆ ಅವರ ಕಾರ್ಯ ಶ್ಲಾಘನಿಯ, ಇಂತಹ ಪುಣ್ಯ ಕಾರ್ಯಕ್ಕೆ ನಾವೂ ಕೂಡ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಮಾಜಿ ಉಪಮೇಯರ್ ನಾರಾಯಣ ಜರತಾಘರ ಅವರು, ಶಾಲೆ, ಕಾಲೇಜು ವಿದ್ಯಾಥಿರ್ಗಳು ಸೇರಿ ಪ್ರತಿ ದಿನ ನೂರಾರು ಜನರ ದಾಹ ತಣಿಸುವ ಕೆಲಸ ಆಗುತ್ತಿದೆ. ಇದು ಫೌಂಡೇಷನ್ನ ಉತ್ತಮ ಕಾರ್ಯ ಎಂದರು.

ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ವಿನಾಯಕ ಲದವಾ, ವಿನಾಯಕ ಕಾಟವೆ, ಮಂಜು ಊಟವಾಲೆ, ಕುಶಾಲ್ ಪವಾರ್, ಆಕಾಶ ರಂಗ್ರೆಜ್, ಶೀನು ಮಗಜಿಕೊಂಡಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net