ದೇವಳ, ದೈವಸ್ಥಾನದೊಳಗೆ ನುಗ್ಗಿದ ನೀರು

shanthikaya
ಶಾಂತಿ ಕಾಯ ಎಂಬಲ್ಲಿ ಗುಡ್ಡ ಜರಿದು ಮರ ರಸ್ತೆಗೆ ಬಿದ್ದಿರುವುದು.
Published on

ಕೊಕ್ಕಡ: ಕಡಬ ತಾಲೂಕು ವ್ಯಾಪ್ತಿಯ ಗುಂಡ್ಯ ಹೊಳೆ ತುಂಬಿ ಹರಿದು ಇಚ್ಚಂಪಾಡಿಯಲ್ಲಿ ನೀರು ರಸ್ತೆಗೆ ನುಗ್ಗಿ ಸಂಪರ್ಕ ಸ್ಥಗಿತಗೊಂಡಿದೆ. ತೋಟಕ್ಕೆ ನೀರು ನುಗ್ಗಿದ್ದು ದೈವಸ್ಥಾನ ಜಲಾವೃತಗೊಂಡಿದೆ.

ನೀರು ರಸ್ತೆಗೆ ನುಗ್ಗಿದ ಪರಿಣಾಮ ಇಚ್ಲಂಪಾಡಿ-ಕಲ್ಲುಗುಡ್ಡೆ, ಇಚ್ಚಂಪಾಡಿ ಮಡಿಪು ರಸ್ತೆಗೆ ನೀರು ಬಂದು ಸಂಪರ್ಕ ಸ್ಥಗಿತಗೊಂಡಿದೆ. ಇಚ್ಲಂಪಾಡಿ-ಉಳ್ಳಾಕ್ಲು ದೈವಸ್ಥಾನ, ಗಂಗಾಧರೇಶ್ವರ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿದೆ. ಹೊಳೆ ಬದಿಯಿರುವ ವಿಶ್ವನಾಥ ಗೌಡ, ಮೇಹಿ ಜಾರ್ಜ್ ಅವರ ತೋಟಕ್ಕೆ ನೀರು ನುಗ್ಗಿದೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಮಣಿಯೇರು ಪ್ರದೇಶದ ವಿಜಯ ಎಂಬುವರ ತೋಟ ಶಿಶಿಲ ಹೊಳೆ ನೇತ್ರಾವತಿಯನ್ನು ಸೇರುವ ಕೂಡಿಗೆ ಎಂಬ ಪ್ರದೇಶದಲ್ಲಿದ್ದು, ಮೂರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಪ್ರವಾಹ ಬಂದು ವಿಜಯ ಅವರ ಮನೆ ಕುಸಿತವಾಗಿತ್ತು. ಇದೀಗ ಇವರ ತೋಟ ಜಲಾವೃತಗೊಂಡಿದೆ. ಗ್ರಾಮದ ಶಾಂತಿಕಾಯ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ಕಿಂಡಿ ಅಣೆಕಟ್ಟು ಸಹಿತ ಸೇತುವೆ ಜಲಾವೃತಗೊಂಡಿದ್ದು ಸಂಪರ್ಕ ಕಡಿದುಕೊಂಡಿತ್ತು.

ಭಾರಿ ಮಳೆಗೆ ಶಿಶಿಲವನ್ನು ಸಂಪರ್ಕಿಸುವ ಶಿಶಿಲೇಶ್ವರ ದೇವಸ್ಥಾನ ಸಂಪರ್ಕ ಕಡಿತಗೊಂಡಿತ್ತು.
ಭಾರಿ ಮಳೆಗೆ ಶಿಶಿಲವನ್ನು ಸಂಪರ್ಕಿಸುವ ಶಿಶಿಲೇಶ್ವರ ದೇವಸ್ಥಾನ ಸಂಪರ್ಕ ಕಡಿತಗೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net