ವಿಠ್ಠಲಾಪುರದಲ್ಲಿ ಮನೆಗೆ ನುಗ್ಗಿದ ನೀರು

1MDG6A PRAVAHA
Published on

ಮುಂಡರಗಿ: ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸಿಂಗಟಾಲೂರು ಬ್ಯಾರೇಜ್​ನಿಂದ ಗುರುವಾರ 1,99,211 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.

ಬ್ಯಾರೇಜ್​ನ ಹಿನ್ನೀರ ಮುಳುಗಡೆ ಪ್ರದೇಶಕ್ಕೆ ಒಳಪಡುವ ಗ್ರಾಮಗಳು ಪ್ರವಾಹ ಸ್ಥಿತಿ ಎದುರಿಸುವಂತಾಗಿದೆ. ವಿಠ್ಠಲಾಪುರ ಗ್ರಾಮದ 10ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿದೆ. ಮಾಹಿತಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಧನಂಜಯ ಅವರು ಪ್ರವಾಹ ಸ್ಥಿತಿಗೆ ಒಳಪಡುವ ಕುಟುಂಬದವರನ್ನು ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಿದ್ದಾರೆ. ದನ, ಕರು, ಮನೆಗಳ ಸಾಮಗ್ರಿ ಸಮೇತ ಕಾಳಜಿ ಕೇಂದ್ರಕ್ಕೆ ಜನ ತೆರಳಿದ್ದಾರೆ.

ಪ್ರತಿ ವರ್ಷವೂ ಪ್ರವಾಹ ಬಂದಾಗ ಈ ರೀತಿಯ ಸಮಸ್ಯೆ ಎದುರಿಸುತ್ತೇವೆ. ಗುರುವಾರ ತುಂಗಭದ್ರಾ ನದಿ ಹರಿವು ಹೆಚ್ಚಾಗುತ್ತಿದೆ. ಗ್ರಾಮದೊಳಗೆ ನಿಧಾನವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. 25ಕ್ಕೂ ಹೆಚ್ಚು ಮನೆಗಳ ಮುಂದೆ ನೀರು ಬರುತ್ತಿದ್ದು, ಈಗ ಸುಮಾರು 10ಮನೆಗಳಿಗೆ ನುಗ್ಗಿದೆ ಎಂದು ವಿಠ್ಠಲಾಪುರ ಗ್ರಾಮಸ್ಥ ನಿಂಗಪ್ಪ ಸ್ವಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net