ನೀರು ಬಿಡುವಂತೆ ಜೊಲ್ಲೆ ದಂಪತಿ ಮನವಿ

4
ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತ ಅಭಿಜಿತ ಮೇತ್ರೆ ಅವರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೀರು ಬಿಡುವಂತೆ ಮನವಿ ಮಾಡಿದರು. ಮಲಗೊಂಡ ಪಾಟೀಲ, ಪವನ ಪಾಟೀಲ, ಜಯವಂತ ಭಾಟಲೆ, ಸಮಿತ ಸಾಸನೆ ಇತರರಿದ್ದರು.
Published on

ನಿಪ್ಪಾಣಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಅವರು ಗುರುವಾರ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತ ಅಭಿಜಿತ ಮೇತ್ರೆ ಅವರನ್ನು ರೈತರೊಂದಿಗೆ ಗುರುವಾರ ಭೇಟಿ ಮಾಡಿ ನೀರಿನ ವಿಷಯ ಕುರಿತು ಚರ್ಚಿಸಿದರು.

ಬರಗಾಲ ಇರುವ ಹಿನ್ನೆಲೆಯಲ್ಲಿ ಬೇಸಿಗೆ ಕಾಲದಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ನೀರು ಬಿಡಬೇಕು. ನಮ್ಮ ಭಾಗದ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಅಧಿಕಾರಿಗಳು ನೀರು ಬಿಡುವ ಭರವಸೆ ನೀಡಿದರು.

ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಸಂಚಾಲಕ ಜಯವಂತ ಭಾಟಲೆ, ಸಮಿತ ಸಾಸನೆ, ಸಿದ್ದು ನರಾಟೆ, ಸುನೀಲ ಪಾಟೀಲ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಅಭಿನಂದನ ಮುದಕುಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net