23ರಂದು ಮಹಾಕುಂಭ ಮೇಳದ ಜಲ ವಿತರಣೆ

Published on

ಬದಿಯಡ್ಕ: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದ ಪವಿತ್ರ ಜಲವನ್ನು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಶಬರಿಗಿರಿ ಬದಿಯಡ್ಕ ಮಂದಿರ ನಿರ್ಮಾಣ ಸಮಿತಿಯಲ್ಲಿ ೆ.23ರಂದು ವಿತರಿಸಲಾಗುವುದು.

ಈ ಅವಕಾಶದಿಂದ ವಂಚಿತರಾಗಿರುವವರಿಗೂ ಈ ಪವಿತ್ರ ಜಲ ಲಭಿಸಬೇಕೆಂಬ ಉದ್ದೇಶದೊಂದಿಗೆ ಬದಿಯಡ್ಕದ ನರೇಂದ್ರ ಬಿ.ಎನ್., ಗಿರೀಶ್ ರೈ ವಳಮಲೆ, ಪ್ರತೀಕ್ ಆಳ್ವ ಪೆರಡಾಲ ಅವರು ಪ್ರಯಾಗರಾಜ್ ಕುಂಭಮೇಳದಿಂದ ಜಲ ಸಂಗ್ರಹಿಸಿ ತಂದಿದ್ದರು. ಶಿವರಾತ್ರಿಯಂದು ಈ ಪುಣ್ಯ ಜಲವನ್ನು ಬೆಳಗ್ಗೆ 10ಕ್ಕೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net