ನೀರು ಸಂರಕ್ಷಣೆಗೆ ಯೋಜನೆ ಹಾಕಿಕೊಳ್ಳಿ: ಆರ್ಟ್ ಆಪ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಸಲಹೆ

060220 Sindhanuru Art of Living Guruvandana Programme
Published on

ಸಿಂಧನೂರು: ನೀರು ಸಂಕ್ಷರಣೆಗೆ ಯೋಜನೆ ಹಾಕಿಕೊಳ್ಳಿ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಹೇಳಿದರು. ನಗರದ ಹೊರ ವಲಯದ ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಜೀವನಕ್ಕೆ ಶುದ್ಧ ನೀರು ಅತಿ ಅವಶ್ಯಕ. ಆದರೆ ಇಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಕೇಳಿರುವೆ. ನೀವೆಲ್ಲ ಸೇರಿ ನೀರು ಸಂರಕ್ಷಣೆಗೆ ಪಣ ತೊಡಬೇಕು. ದೇಶದ ಉತ್ಕೃಷ್ಟ ಸಂಸ್ಕೃತಿ ಅಳಿಯದಂತೆ ಎಚ್ಚರವಹಿಸುವ ಅಗತ್ಯತೆಯಿದೆ ಎಂದರು.

ಮಕ್ಕಳು ಪೌಷ್ಟಿಕಾಂಶ ಆಹಾರ ಸೇವೆನೆ ಮಾಡಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು. ಪ್ರಪಂಚದಲ್ಲಿ ಮನುಷ್ಯ ಅತ್ಯಂತ ಬುದ್ಧಿ ಜೀವಿಯಾಗಿದ್ದು, ಎಲ್ಲವನ್ನು ತಿಳಿದುಕೊಂಡು ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ಕಷ್ಟ ಪಟ್ಟು ಅಭ್ಯಾಸ ಮಾಡಿ, ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀ ರವಿಶಂಕರ ಗುರೂಜಿಗೆ ಶಿಕ್ಷಣ ಸಂಸ್ಥೆ, ಶಾಸಕರು, ಗಣ್ಯರು, ಅಭಿಮಾನಿಗಳು ಸನ್ಮಾನಿಸಿದರು. ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಶಿಕ್ಷಣ ಸಂಸ್ಥೆಯ ರಾಮರಾವ್, ವೈ.ನರೇಂದ್ರನಾಥ, ಆರ್ಟ್ ಆಫ್ ಲಿವಿಂಗ್ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net