

ಮುಂಡರಗಿ: ನೀರು ಅಮೂಲ್ಯವಾಗಿದ್ದು, ಇದನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಲು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಾದ್ಯಂತ ಗ್ರಾ.ಪಂ. ಮತ್ತು ಜನರ ಸಹಯೋಗದಲ್ಲಿ ಈವರೆಗೂ 6,400ಕ್ಕೂ ಹೆಚ್ಚು ಕೆರೆಗಳನ್ನು ಹೊಳೆತ್ತುವ ಕಾಮಗಾರಿ ಕೈಗೊಂಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಯೋಗೀಶ ಎ. ಹೇಳಿದರು.
ತಾಲೂಕಿನ ಜಂತ್ಲಿಶಿರೂರು ಗ್ರಾಮದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಗುರುವಾರ ಕುಡಿಯುವ ನೀರಿನ ಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಿಡಿಒ ವಸಂತ ಗೋಕಾಕ ಮಾತನಾಡಿ, ಕೆರೆಯನ್ನು ಸುಸ್ಥಿರವಾಗಿ ಸ್ವಚ್ಛತೆಯೊಂದಿಗೆ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಧರ್ಮಸ್ಥಳದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಗವಿಸಿದ್ದಯ್ಯ ಹಳ್ಳಿಕೇರಿಮಠ, ಉಪಾಧ್ಯಕ್ಷ ರವಿ ದೊಡ್ಡಮನಿ, ಇಂಜಿನಿಯರ್ ನಿಂಗರಾಜ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರತ್ನವ್ವ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ವಿಶಾಲಾ ಮಲ್ಲಾಪೂರ ಮತ್ತು ಕೃಷಿ ಮೇಲ್ವಿಚಾರಕ ಈರಣ್ಣ ಕುರುಡಗಿ, ವಲಯ ಮೇಲ್ವಿಚಾರಕ ರೇವಪ್ಪ, ಗ್ರಾ.ಪಂ. ಸದಸ್ಯರು ಇತರರಿದ್ದರು. ಮಹಾಂತೇಶ ಎಂ. ಕಾರ್ಯಕ್ರಮ ನಿರೂಪಿಸಿದರು.