ನೀರಿನ ಸೌಕರ್ಯದಿಂದ ಅನುಕೂಲ

28Rayabag1
Published on

ರಾಯಬಾಗ: ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸು ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ವಿವಿಧ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಜೆಜೆಎಂ ಯೋಜನೆಯಡಿ ಮಂಜೂರಾದ 2.54 ಲಕ್ಷ ರೂ. ಅನುದಾನದಲ್ಲಿ 966 ಮನೆಗಳಿಗೆ ನಲ್ಲಿ ಸಂಪರ್ಕ, 5 ಮೇಲ್ಮಟ್ಟದ ಜಲಸಂಗ್ರಾಲಯ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ರಮುಖವಾಗಿ ನೀರಿನ ಸೌಕರ್ಯ ಮತ್ತು ರಸ್ತೆಗಳನ್ನು ಸುಧಾರಿಸುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಎಇಇ ಸುಭಾಷ ಭಜಂತ್ರಿ, ಜೆಇ ಲೋಹಿತ ಕಾಂಬಳೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಮಹಾದೇವ ಬೊರಗಾಂವೆ, ಶ್ರೀಧರ ಕುಡಚೆ, ಬಾದಶಾ ಡಾಂಗೆ, ಮಜ್ಜಿದ ಡಾಂಗೆ, ವಸಂತ ಕಾಂಬಳೆ, ಸಿದ್ದಪ್ಪ ಪೂಜೇರಿ, ನಿಂಗಪ್ಪ ಪೂಜೇರಿ, ಮುರೇಂದ್ರ ನಿಶಾನಂದಾರ, ಕೇಶವ ಹವಾಲ್ದಾರ, ಸುಹಾಸ ಪೂಜೇರಿ, ವಸಂತ ನಿಶಾನದಾರ, ಶಂಕರ ಗಂಗನ್ನವರ, ಸುರೇಶ ದೇವಋಷಿ, ಮಧುಕರ ಕಾಂಬಳೆ, ಕೆಂಪಣ್ಣ ಮೈಶಾಳೆ, ಶಂಕರ ನಿಡವಣಿ, ಸದಾಶಿವ ನಿಡವಣಿ, ಗೋಪಾಲ ಕೋಚೆರಿ, ಗೋಪಾಲ ನಿಡಗುಂದಿ, ರಂಜಾನ ಮಕಾಂದಾರ, ಬಸಪ್ಪ ಖಿಲಾರೆ, ಅಝಾದ ಡಾಂಗೆ, ರಮೇಶ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net