ಬಳ್ಳೂರ ಸರ್ಕಾರಿ ಶಾಲೆಗೆ ಜಲದಿಗ್ಬಂಧನ

school
ನವಲಗುಂದ ತಾಲೂಕಿನ ಬಳ್ಳೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಮಳೆ ನೀರು ನಿಂತು ಹೊಂಡದಂತಾಗಿರುವುದು.
Published on

ನವಲಗುಂದ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವರ್ಷಧಾರೆಯ ಅಬ್ಬರಕ್ಕೆ ತಾಲೂಕಿನ ಬಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಲದಿಗ್ಬಂಧನ ಉಂಟಾಗಿದೆ. ಶಾಲೆಯ ಆವರಣದ ತುಂಬಾ ನೀರು ತುಂಬಿ ಹೊಂಡದಂತೆ ಗೋಚರಿಸುತ್ತಿದೆ. ಮಕ್ಕಳು ಶಾಲೆಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದಸರಾ ರಜೆ ಮುಗಿಸಿ ಶಾಲೆಯತ್ತ ಮುಖ ಮಾಡಿದ ಮಕ್ಕಳಿಗೆ ಮಳೆಯ ಅವಾಂತರದಿಂದಾಗಿ ಶಾಲೆಯಲ್ಲಿ ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ. 1ರಿಂದ 8 ನೇ ತರಗತಿವರೆಗೆ 227 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಹೊಸದಾಗಿ ಎರಡು ಕೋಣೆಗಳನ್ನು ನಿರ್ಮಾಣ ಮಾಡಿರುವುದು ಬಿಟ್ಟರೆ ಉಳಿದಿದಂತೆ 6 ಕೊಠಡಿಗಳು 50 ವರ್ಷದ ಹಳೆಯ ಕಟ್ಟಡಗಳಾಗಿವೆ.

ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಜತೆಗೆ ಶಾಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net