

ಹುಬ್ಬಳ್ಳಿ : ಇಲ್ಲಿನ ದೇಶಪಾಂಡೆ ನಗರದ ಶ್ರೀ ಕೃಷ್ಣ ಮಠದಲ್ಲಿ ಜು. 16 ರಂದು ಶ್ರೀ ಕೃಷ್ಣದೇವರಿಗೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಎಳನೀರಿನಿಂದ ಮಹಾಭಿಷೇಕ ನಡೆಯಲಿದೆ.
ಭಕ್ತರು ಸೇವಾ ರೂಪದಲ್ಲಿ 15 ರ ಸಂಜೆಯವರೆಗೆ ಎಳನೀರು, ಕಾಯಿಗಳನ್ನು ಮಠಕ್ಕೆ ಸಲ್ಲಿಸಬಹುದು.
17ರಂದು ಬೆಳಗ್ಗೆ 8.30ಕ್ಕೆ ಆಷಾಢ ಏಕಾದಶಿ ನಿಮಿತ್ತ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣ ನಡೆಯಲಿದೆ. ಅದೇ ದಿನ ಸಂಜೆ 6.30ಕ್ಕೆ ಶ್ರೀ ಗಳಿಂದ ಕೃಷ್ಣಕಲ್ಯಾಣ ಮಂಟಪದಲ್ಲಿ ಭಾಗವತ ಪ್ರವಚನ ನಡೆಯಲಿದೆ.
ಭಕ್ತರು, ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಕೋರಿದೆ.