ರಸ್ತೆ ತುಂಡಾಗಿ ಗದ್ದೆ ಪ್ರವೇಶಿಸಿದ ನೀರು, ಮಣ್ಣು

Kellaputtige
ಕೆಲ್ಲಪುತ್ತಿಗೆಯ ಪರಾರಿ ಬೀಡು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ರಸ್ತೆ ಭಾನುವಾರ ತುಂಡಾಗಿ ಮಳೆಯ ನೀರು ಮತ್ತು ಮಣ್ಣು ಗದ್ದೆಗೆ ಸೇರಿ ಹೂಳು ತುಂಬಿಕೊಂಡಿದೆ.
Published on

ಮೂಡುಬಿದಿರೆ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲ್ಲಪುತ್ತಿಗೆಯ ಪರಾರಿ ಬೀಡು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ರಸ್ತೆ ಭಾನುವಾರ ತುಂಡಾಗಿ ಮಳೆಯ ನೀರು ಮತ್ತು ಮಣ್ಣು ಗದ್ದೆಗೆ ಸೇರಿ ಹೂಳು ತುಂಬಿಕೊಂಡಿದೆ.

ದರೆಗುಡ್ಡೆ ಗ್ರಾಪಂ ವ್ಯಾಪ್ತಿಯ ಕೆಲ್ಲಪುತ್ತಿಗೆ ಭೂತರಾಜ ಗುಡ್ಡೆಯಿಂದ ಪರಾರಿಬೀಡುವಿಗೆ ಸಂಪರ್ಕ ಕಲ್ಪಿಸಿ ನೂತನವಾಗಿ ನಿರ್ಮಿಸಿರುವ ರಸ್ತೆಯ ಕಾಮಗಾರಿ ಅರ್ಧಂಬಧರ್ವಾಗಿತ್ತು. ಪ್ರಸಕ್ತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹತ್ತಿರದ ಮೂಡುಮಲೆಯಿಂದ ಹರಿದು ಬಂದ ನೀರು ರಸ್ತೆಯಲ್ಲಿ ತುಂಬಿಕೊಂಡಿದ್ದು, ಪರಿಣಾಮ ರಸ್ತೆ ತುಂಡಾಗಿ ತೋಡಿನ ಮೂಲಕ ನೀರು ಮತ್ತು ಮಣ್ಣು ಗದ್ದೆಗಳಿಗೆ ನುಗ್ಗಿಬೆಳೆ ನಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net