

ಬೆಂಗಳೂರು: ನಗರದಲ್ಲಿ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವುದು, ನೀರಿನ ಗೃಹೇತರ ಬಳಕೆ ಪರಿವರ್ತನೆ ಅರ್ಜಿ ವಿಳಂಬ ಸೇರಿ ಇತರೆ ಕುಂದುಕೊರತೆಗಳಿಗೆ ಕುರಿತು ಜಲಮಂಡಳಿಯಿಂದ ಗುರುವಾರ (ಡಿ.10) ಬೆಳಗ್ಗೆ 9.30 ರಿಂದ 11 ಗಂಟೆವರೆಗೆ ನೀರಿನ ಅದಾಲತ್ ಆಯೋಜಿಸಲಾಗಿದೆ. ಜಲಮಂಡಳಿಯ 12 ವಲಯಗಳು ಹಾಗೂ 12 ಸೇವಾ ಠಾಣೆಗಳಲ್ಲಿ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ಜಲಮಂಡಳಿಯ ಕುಂದು ಕೊರತೆಗಳಿಗೆ ಸಹಾಯವಾಣಿ 1916, ದೂರು ನಿರ್ವಹಣಾ ಕೇಂದ್ರ 080- 2223 8888 ಹಾಗೂ ವಾಟ್ಸ್‌ಆ್ಯಪ್ ಸಂಖ್ಯೆ 87622 28888 ಸಂಪರ್ಕಿಸಬಹುದು.