ಮಲಿನ ನೀರು ನದಿ ಸೇರದಂತೆ ಕ್ರಮ ವಹಿಸಲಿ

water
Published on

ಮಡಿಕೇರಿ:

ಕೊಡಗಿನಲ್ಲಿ ಮಡಿಕೇರಿ ನಗರಸಭೆ ಸೇರಿದಂತೆ ಜಿಲ್ಲೆಯ ನಾಲ್ಕು ಪ್ರಮುಖ ಪಟ್ಟಣಗಳಲ್ಲಿ ಪ್ರತಿನಿತ್ಯ ಸುಮಾರು 90 ಲP್ಷÀ ಲೀಟರ್‌ಗೂ ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ಆದರೆ ಇಷ್ಟು ಪ್ರಮಾಣದ ನೀರು ಬಹುತೇಕ ಕಡೆಗಳಲ್ಲಿ ಯಾವ ರೀತಿಯಲ್ಲೂ ಸಂಸ್ಕರಣೆಯಾಗದೆ ನದಿ ಮತ್ತು ಇತರ ಜಲಮೂಲಗಳಿಗೆ ಸೇರುತ್ತಿದೆ.

ಜಿಲ್ಲೆಯಲ್ಲಿ ಮಡಿಕೇರಿ ನಗರಸಭೆ, ಕುಶಾಲನಗರ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿಗಳು ಮತ್ತು 104 ಗ್ರಾ.ಪಂ.ಗಳಿವೆ. ಸ್ಥಳೀಯ ಸಂಸ್ಥೆಗಳ ಆಡಳಿತ ಹೊಂದಿರುವ ನಾಲ್ಕು ಪ್ರಮುಖ ಪಟ್ಟಣಗಳಿಂದ ಪ್ರತಿದಿನ ಸುಮಾರು 95.70 ಲP್ಷÀÀ ಲೀಟರ್‌ಗಳಷ್ಟು ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ಗ್ರಾ.ಪಂ.ಗಳಲ್ಲಿ

ಉತ್ಪಾದನೆಯಾಗುವ ಕೊಳಚೆ ನೀರಿನ ಪ್ರಮಾಣದ ಅಂದಾಜು ಇನ್ನೂ ನಡೆಸಿಲ್ಲ. ಇದಲ್ಲದೆ 5.69 ಲP್ಷÀ ಲೀಟರ್‌ಗಳಷ್ಟು ಕೈಗಾರಿಕಾ ತ್ಯಾಜ್ಯ ನೀರು ಕೂಡ ಪ್ರತಿದಿನ ಹೊರಬರುತ್ತದೆ.

104 ಗ್ರಾ.ಪಂ. ಮತ್ತು 4 ಸ್ಥಳೀಯ ಆಡಳಿತ ವ್ಯವಸ್ಥೆ ಹೊಂದಿರುವ ಪಟ್ಟಣಗಳ ತ್ಯಾಜ್ಯ ನೀರು ಅಕ್ಕಪಕ್ಕದ ನದಿ, ಕೆರೆ, ಕೊಳ ಸೇರಿದಂತೆ ನೇರವಾಗಿ ಜಲಮೂಲಗಳಿಗೆ ಸೇರುತ್ತಿದೆ.

ರಾಷ್ಟಿçÃಯ ಜಲ ಗುಣಮಟ್ಟ ಉಸ್ತುವಾರಿ ಕಾರ್ಯಕ್ರಮ ಅಡಿಯಲ್ಲಿ ಭಾಗಮಂಡಲದಿAದ ಕುಶಾಲನಗರ ತಾಲೂಕು ಕಣಿವೆ ಸೇತುವೆ ತನಕ 10 ಕಡೆಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರತಿ ತಿಂಗಳೂ ಕಾವೇರಿ ನದಿಯಿಂದ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಜಲಮೂಲಗಳ ಗುಣಮಟ್ಟ ನಿರ್ಧರಿಸಲು ಜಿಲ್ಲೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ.

ಜೀವನದಿ ಕಾವೇರಿ ಮಲೀನವಾಗುವುದರ ಹಿಂದೆ ಕುಶಾಲನಗರ ಪಟ್ಟಣದ ಕೊಡುಗೆ ದೊಡ್ಡದಿತ್ತು. ಆದರೆ ಇಲ್ಲಿ ಈಗ ಮಲೀನ ನೀರು ನೇರವಾಗಿ ನದಿ ಸೇರದಂತೆ ಪುರಸಭೆ ವತಿಯಿಂದ ಕ್ರಮ ತೆಗೆದುಕೊಳ್ಳಲಾಗಿದೆ. ಯುಜಿಡಿ ಕಾಮಗಾರಿ ಪರಿಪೂರ್ಣ ಆದರೆ ಸಮಸ್ಯೆ ಬಗೆ ಹರಿಯುವ ನಿರೀಕ್ಷೆ ಇದೆ. ಮಡಿಕೇರಿಯಲ್ಲೂ ನಗರದ ಶೇ.60ರಷ್ಟು ಪ್ರದೇಶ ಒಳಗೊಳ್ಳುವಂತೆ 3 ದಶ ಲP್ಷÀ ಲೀಟರ್ ಸಾಮರ್ಥ್ಯದ ಯುಜಿಡಿ ಯೋಜನೆ ಜಾರಿಯಲ್ಲಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಇಂಥ ಯಾವುದೇ ಯೋಜನೆ ಇಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ನದಿ ಮಾಲಿನ್ಯ ತಡೆಗಟ್ಟುವಲ್ಲಿ ಮೊದಲನೆಯದಾಗಿ ಸ್ಥಳೀಯ ಸಂಸ್ಥೆ ಎಂದು ಕರೆಸಿಕೊಳ್ಳುವ ಗ್ರಾಮ ಪಂಚಾಯಿತಿ ಜನರಲ್ಲಿ ಜಾಗೃತಿ ಮೂಡಿಸಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರಿನ ಸಂಸ್ಕರಣ ಘಟಕ, ಅರಣ್ಯೀಕರಣ, ನೀರಿನ ಶುದ್ದೀಕರಣ ಘಟಕ ಮುಂತಾದವುಗಳಿಗೆ ಒತ್ತು ನೀಡಬೇಕು. ಪ್ರಮುಖವಾಗಿ ಸಾರ್ವಜನಿಕ ವಲಯದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಕೈಗಾರಿಕಾ ತ್ಯಾಜ್ಯ ವಿಸರ್ಜನೆಯನ್ನು ನಿಷೇಧಿಸಬೇಕು. ಇದರಿಂದ ನೀರಿನ ಮಾಲಿನ್ಯ ತಡೆಗಟ್ಟುವುದರ ಜತೆಯಲ್ಲಿ ಜಲಚರಗಳು, ವನ್ಯಜೀವಿಗಳು ಹಾಗೂ ಮಾನವ ಸಂಕುಲ ಸಂರಕ್ಷಿಸಬಹುದು

ಯೋಗೇಶ್ ಪೂಜಾರಿ, ಮದೆನಾಡು ಗ್ರಾಮ

ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಗೂ ಚರಂಡಿ ನೀರು ನದಿ ಒಡಲು ಸೇರುತ್ತಿದೆ. ಮನೆಗಳ ಕೊಳಚೆ ನೀರು ನೇರವಾಗಿ ನದಿ ಸೇರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ನದಿ ದಡದಲ್ಲೇ ಕಸ ಸುರಿಯಲಾಗುತ್ತಿದೆ. ಇದರಿಂದ ಕಸವೂ ನದಿಗೆ ಸೇರಿ ಮಲೀನವಾಗುತ್ತಿದೆ.ಸಂಬAಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳದೆ ಇರುವುದರಿಂದ ನೀರು ಕಲುಷಿತಗೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳು ನೇರ ಕಾರಣವಾಗಿದ್ದಾರೆ

ಪೂವಮ್ಮ, ಮಾಜಿ ಸದಸ್ಯೆ, ಗ್ರಾ.ಪಂ. ಸಿದ್ದಾಪುರ

ಬೇಸಿಗೆಯಲ್ಲಿ ಪ್ರತಿ ವರ್ಷ ನದಿ ನೀರು ಕಡಿಮೆಯಾಗುತ್ತದೆ. ಇದರಿಂದ ನದಿಗಳು ಸಂಪೂರ್ಣ ಮಲಿನವಾಗುತ್ತಿದೆ. ಇದಕ್ಕೆ ಕಾರಣ ಕೈಗಾರಿಕೆಗಳು. ಇವು ನೇರವಾಗಿ ನೀರನ್ನು ನದಿಗಳಿಗೆ ಹರಿಸುತ್ತವೆ. ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಪ್ರತಿ ಕೈಗಾರಿಕಾ ಕೇಂದ್ರದ ನೀರು ಎಲ್ಲಿಗೆ ಸೇರುತ್ತದೆ ಎಂದು ಪರಿಶೀಲನೆ ಮಾಡದೆ ಇರುವುದೇ ಕಾರಣ. ಮುಂದಿನ ದಿನಗಳಲ್ಲಾದರೂ ನದಿ ಕಲುಷಿತವಾಗದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರು ಸಹ ತಾವು ಬಳಕೆ ಮಾಡುವ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ನದಿಗಳಿಗೆ ಬಿಸಾಡುವುದನ್ನು ನಿಲ್ಲಿಸಬೇಕು.

ಅಕ್ಷಿತಾ, ಖಾಸಗಿ ಸಂಸ್ಥೆ ಉದ್ಯೋಗಿ, ದುಂಡಳ್ಳಿ

ನದಿ, ಹೊಳೆ ಮಾಲಿನ್ಯಕ್ಕೆ ಕೆಲ ಜನರೇ ಕಾರಣ. ಕಸವನ್ನು ಚೀಲಗಳಲ್ಲಿ ಕಟ್ಟಿ ಹೊಳೆಗೆ ಎಸೆಯುವುದನ್ನು ಕಾಣುತ್ತಿದ್ದೇವೆ. ಪಟ್ಟಣ ಪ್ರದೇಶದ ಮಲಿನ ನೀರು ಹೊಳೆ ಸೇರುತ್ತಿರುವುದು ಕಟು ಸತ್ಯ. ಸ್ಥಳೀಯ ಸಂಸ್ಥೆಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂಘ ಸಂಸ್ಥೆಗಳು ಹೋರಾಟ ಮಾಡಲೇ ಬೇಕಾಗಿದೆ. ಮಾಲಿನ್ಯ ನೀರನ್ನು ಮನುಷ್ಯರು, ಪ್ರಾಣಿ, ಪಕ್ಷಿಗಳು ಕುಡಿಯಬೇಕಾಗಿದೆ.

ಮನೋಹರ್, ಕೃಷಿಕ, ಯಡೂರು ಗ್ರಾಮ.

ಬೇಸಿಗೆ ಆರಂಭದೊAದಿಗೆ ನದಿ ಮೂಲಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಕೊಚ್ಚಿ ಬಂದ ಕೊಳಚೆ ಇನ್ನಿತರ ತ್ಯಾಜ್ಯ ಹಳ್ಳಗಳಲ್ಲಿ ಸಂಗ್ರಹವಾಗುತ್ತದೆ. ಇನ್ನು ಕೆಲವರು ಇಂಥ ಸಂದರ್ಭಗಳಲ್ಲಿ ಮೀನು ಹಿಡಿಯಲು ಔಷಧಿಯನ್ನು ನದಿ ಮೂಲಕ್ಕೆ ಹಾಕುತ್ತಾರೆ. ಎಲ್ಲ ಕಾರಣಗಳಿಂದ ಬೇಸಿಗೆ ಸಂದರ್ಭ ನದಿ ಮೂಲ ಹೆಚ್ಚಾಗಿ ಮಾಲಿನವಾಗುತ್ತಿದ್ದು ಆದಷ್ಟು ಜನರು ನದಿಗೆ ಮಾಲಿನ್ಯಕಾರಕ ಹಾಗೂ ಜಲಚರಗಳಿಗೆ ಹಾನಿಯಾಗುವಂಥ ವಸ್ತುಗಳನ್ನು ನದಿ ಮೂಲಗಳಿಗೆ ಸೇರದಂತೆ ನೋಡಿಕೊಳ್ಳುವುದು ಉತ್ತಮ.

ಸಿ. ಅಶೋಕ್, ರಾಮನಗರ, ವಿರಾಜಪೇಟೆ

ನದಿ ನೀರು ರಕ್ಷಣೆ ನಮ್ಮೆಲ್ಲರ ಹೊಣೆ. ಸಂಬAಧಪಟ್ಟವರು ಮಾತ್ರ ಮಾಡಲಿ ಎಂದು ಕಾಯಬಾರದು. ನದಿ ನೀರು ರಕ್ಷಣೆ ಮಾಡಿದರೆ ನಾವು ಹೆಚ್ಚು ಸಮಯ ಬದುಕಬಹುದು. ಇಂದು ಹೆಸರುವಾಸಿಯಾದ ನದಿಗಳ ಅವ್ಯವಸ್ಥೆ ನೋಡಿದರೆ ಮುಂದೆ ಏನಾಗಬಹುದು ಎಂಬ ಭಯ ಪ್ರಾರಂಭವಾಗಿದೆ. ನದಿಗಳನ್ನು ಡಸ್ಟ್ಬಿನ್‌ನಂತೆ ಬಳಕೆ ಮಾಡುತ್ತಿರುವುದು ದುರಂತ.

ಪುನೀತ್ ತಾಳುರು, ಉದ್ಯಮಿ, ಶನಿವಾರಸಂತೆ

ನದಿಮಾಲಿನ್ಯ ತಡೆಗಟ್ಟುವುದು ಈಗ ನಮ್ಮೆದುರು ಇರುವ ದೊಡ್ಡ ಸವಾಲಾಗಿದೆ. ನದಿಯಂಚಿನ ಜನವಸತಿ ಪ್ರದೇಶಗಳಿಂದ ತ್ಯಾಜ್ಯ ನೀರು ನೇರವಾಗಿ ನದಿ ಸೇರುತ್ತಿದೆ. ಕಾವೇರಿ ತವರಿನಲ್ಲೇ ನದಿಯ ನೀರನ್ನು ನೇರವಾಗಿ ಕುಡಿಯುವುದಿರಲಿ ಸ್ನಾನ ಮಾಡುವುದಕ್ಕೂ ಬಳಸಲು ಸಾಧ್ಯವಾಗದ ಸ್ಥಿತಿ ಇದೆ. ಇದು ಎಲ್ಲಾ ಪ್ರಮುಖ ನದಿಗಳಲ್ಲೂ ಕಂಡು ಬರುತ್ತಿರುವ ಪರಿಸ್ಥಿತಿ ಆಗಿದ್ದು, ಈ ಸಂಬAಧ ಸರ್ಕಾರ ದೀರ್ಘಕಾಲೀನ ಯೋಜನೆ ರೂಪಿಸದಿದ್ದರೆ ನದಿಗಳು ಜೀವ ಕಳೆದುಕೊಳ್ಳಬಹುದು.

ಎಂ.ಎನ್. ಚಂದ್ರಮೋಹನ್, ಸಂಚಾಲಕ, ಕಾವೇರಿ ಸ್ವಚ್ಛತಾ ಆಂದೋಲನ

ಕುಶಾಲನಗರ ಪಟ್ಟಣದಿಂದ ಕೊಳಚೆ ನೀರು ನದಿಗೆ ಸೇರದಂತೆ ಏನೆಲ್ಲಾ ವ್ಯವಸ್ಥೆ ಮಾಡಬೇಕೋ ಅದನ್ನೆಲ್ಲಾ ಮಾಡಲಾಗಿದೆ. ಕೊಡಗು ಮಾತ್ರವಲ್ಲದೆ ಮೈಸೂರು ಜಿಲ್ಲೆಯಲ್ಲೂ ಇಂಥ ಯೋಜನೆ ಎಲ್ಲೂ ರೂಪಿಸಿಲ್ಲ. ನದಿ ಮಾಲಿನ್ಯ ತಡೆಯುವಲ್ಲಿ ಮಾದರಿ ಎನ್ನಬಹುದಾದ ಯೋಜನೆ ನಮ್ಮಲ್ಲಿ ರೂಪಿಸಿದ್ದೇವೆ. ಇದನ್ನು ಬೇರೆ ಕಡೆಯಲ್ಲೂ ಅನುಷ್ಠಾನಕ್ಕೆ ತರಬಹುದಾಗಿದೆ.

ಕೃಷ್ಣಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ ಕುಶಾಲನಗರ

ನದಿ ಮಾಲಿನ್ಯ ತಡೆಗಟ್ಟುವಲ್ಲಿ ಎಲ್ಲರ ಜವಾಬ್ದಾರಿಯೂ ಇದೆ. ಅದರಲ್ಲೂ ಜೀವನದಿ ಕಾವೇರಿ ಮೂಲದಲ್ಲೇ ಕಲುಷಿತ ಆಗುತ್ತಿರುವುದು ನೋವಿನ ವಿಷಯ. ಕುಶಾಲನಗರದ ಪಟ್ಟಣದಲ್ಲಿ ನದಿಗೆ ಕಲುಷಿತ ನೀರು ಸೇರದಂತೆ ಈಗಾಗÀಲೇ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬೇರೆ ಸ್ಥಳೀಯಾಡಳಿತಗಳಿಗೂ ಈ ಕ್ರಮ ಅನುಸರಿಸುವಂತೆ ಸೂಚಿಸಲಾಗುವುದು. ನದಿ ಮಾಲಿನ್ಯ ತಡೆಗಟ್ಟುವ ಯೋಜನೆ ಸಂಬAಧ ಸರ್ಕಾರದ ಮಟ್ಟದಲ್ಲೂ ಗಮನ ಸೆಳೆಯಲಾಗುವುದು.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net