

ಆಲೂರು : ವಾಟೆಹೊಳೆ ಡ್ಯಾಂ ತುಂಬಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಮೊದಲ ಬಾರಿಗೆ ಶನಿವಾರ ಬಾಗಿನ ಅರ್ಪಿಸಿ ಗಂಗಾಮಾತೆಗೆ ಪೂಜೆ ಸಲ್ಲಿಸಿದರು.
ತಾಲೂಕಿನ ಚಿನ್ನಹಳ್ಳಿ ಗ್ರಾಮದ ವಾಟೆಹೊಳೆ ಜಲಾಶಯವು ಎರಡು ತಾಲೂಕಿಗೆ ಸೇರಿದ್ದಾಗಿದೆ. ಜತೆಗೆ ಇದೇ ಮೊದಲ ಬಾರಿಗೆ ಬಂದು ನಾನು ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯ. ಪ್ರತಿ ವರ್ಷವೂ ಇದೇ ರೀತಿ ವಾಟೆಹೊಳೆ ಜಲಾಶಯ ತುಂಬಿ ಹರಿಯಲಿ. ಈ ಭಾಗದ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ರತ್ನಮ್ಮ, ಆಲೂರು ತಾಲೂಕು ಬಿಜೆಪಿ ಅಧ್ಯಕ್ಷ ಉಮಾ ರವಿಪ್ರಕಾಶ್, ಖಜಾಂಚಿ ಹೇಮಂತ್, ಮುಖಂಡರಾದ ಹನುಮಂತೇಗೌಡ, ಕಿರಣ್, ನವೀನ್, ಮೋಹನ್, ಹರೀಶ್, ಮಂಜೇಗೌಡ, ವಾಟೆಹೊಳೆ ಜಲಾಶಯದ ಸಹಾಯಕ ನಿರ್ದೇಶಕ ಧರ್ಮರಾಜು, ಇಂಜಿನಿಯರ್ ಸಂದೀಪ್ ಸೇರಿದಂತೆ ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಜರಿದ್ದರು.