ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿ

hnd 19
ತೇರದಾಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಸಿಪಿಐ ಸಂಜೀವ ಬಳಗಾರ ಮಾತನಾಡಿದರು. ಪಿಎಸ್‌ಐ ಅಪ್ಪು ಐಗಳಿ ಇದ್ದರು.
Published on

ತೇರದಾಳ: ಬ್ಯಾಂಕಿನಲ್ಲಿ ವ್ಯವಹಾರ ಇರದಿದ್ದರೂ ಕೆಲವರು ಸಂಶಯಾಸ್ಪದವಾಗಿ ಅಲೆದಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು ಎಂದು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀದರ, ಮಂಗಳೂರ ಹಾಗೂ ವಿಜಯಪುರಗಳಲ್ಲಿ ಬ್ಯಾಂಕ್‌ಗಳಲ್ಲಿನ ಹಣ ದರೋಡೆ ನಡೆದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಬ್ಯಾಂಕಿನಲ್ಲಿ ಹೆಚ್ಚಿಗೆ ಹಣ ಇಟ್ಟುಕೊಳ್ಳದೆ ನಿಮ್ಮ ನಿಯಮಾನುಸಾರ ಹಣ ಇಟ್ಟುಕೊಳ್ಳಿ. ಸಹಕಾರಿ, ಸೌಹಾರ್ದ ಹಾಗೂ ಸಂಘ ಸಂಸ್ಥೆಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಿಸಿಕೊಳ್ಳಲು ಅವಕಾಶ ಇಲ್ಲದಿದ್ದರೆ ಸಿಪಾಯಿಗೆ ತರಬೇತಿ ನೀಡಬೇಕು. ಖಾರದ ಪುಡಿ ಹಾಗೂ ಪೆಪ್ಪರ ಸ್ಪ್ರೆ ಇಟ್ಟುಕೊಂಡರೆ ಒಳ್ಳೆಯದು. ಸಿಸಿಟಿವಿಗಳು ಹೆಸರಿಗಷ್ಟೇ ಅಳವಡಿಸಬೇಡಿ. ಗುಣಮಟ್ಟದ ಹಾಗೂ ಬ್ಯಾಂಕಿಗೆ ಬರುವ ದಾರಿ ಕಾಣುವ ಹಾಗೆ ಅಳವಡಿಸಬೇಕು. ಡಿವಿಆರ್ ಡಕಾಯಿತರ ಕೈಗೆ ಸಿಗದ ಹಾಗೆ ಇಡಬೇಕು. ತಾವೂ ಪ್ರತಿಯೊಂದು ಬ್ಯಾಂಕಿಗೆ ಭೇಟಿ ನೀಡಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತೇವೆ. ಬ್ಯಾಂಕಿನಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಲಕ ಅಳವಡಿಸಿ ಎಂದು ಸಲಹೆ ನೀಡಿದರು. ಪಿಎಸ್‌ಐ ಅಪ್ಪಣ್ಣ ಐಗಳಿ ಮಾತನಾಡಿದರು.

ವಿವಿಧ ಬ್ಯಾಂಕಿನ ಅಧಿಕಾರಿಗಳು ಸಲಹೆ ಹಾಗೂ ಮಾಹಿತಿ ಪಡೆದುಕೊಂಡರು. ವಿವೇಕ ಸುವರ್ಣಖಂಡಿ, ಸಾಗರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net