

ಮಂಗಳೂರು: ಕೃಷಿಕರಿಗಾಗಿ ನಡೆಸುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕಾರ್ಯಕ್ರಮ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯಿತು. ಈ ಹಿನ್ನೆಲೆ ಕಾರ್ಯಕ್ರಮದ ನೇರಪ್ರಸಾರ ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜು ಆವರಣದ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನಲ್ಲಿ 9 ಕೋಟಿ 26 ಲಕ್ಷ ಲಾನುಭವಿ ರೈತರಿಗೆ 20 ಸಾವಿರ ಕೋಟಿ ರೂ. ಬಿಡುಗಡೆ ಗೊಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅದಾಯ ದ್ವಿಗುಣ ಯೋಜನೆಯಲ್ಲಿ ಸಾಧನೆ ಮಾಡಿದ ಕೃಷಿಕರಾದ ಚಂದ್ರಶೇಖರ್ ಗಟ್ಟಿ, ದಯಾನಂದ ಕುಲಾಲ್, ಕೆನ್ಯೋಟ್ ಆರೊನ್ಹರನ್ನು ಸನ್ಮಾನಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ಶೈಲೇಶ್, ಭರತ್ ಕುಮಾರ್, ಪೂರ್ಣಿಮಾ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರು ಮಹೇಶ್ ಜೋಗಿ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕಿಶೋರ್ ಪುತ್ತೂರು, ಕೋಶಾಧಿಕಾರಿ ಸಂಜಯ ಪ್ರಭು, ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ. ಜೆ. ರಮೇಶ್, ವಿಜ್ಞಾನಿಗಳಾದ ಡಾ. ರವೀಂದ್ರ ಗೌಡ ಪಾಟೀಲ್, ಡಾ. ಶಿವ ಕುಮಾರ್ ಆರ್., ಡಾ. ಹರೀಶ್ ಶೆಣೈ, ಡಾ. ಮಲ್ಲಿಕಾರ್ಜುನ ಎಲ್., ಡಾ. ಕೇದರಾನಾಥ್, ಡಾ. ರಶ್ಮಿ ಆರ್. ಉಪಸ್ಥಿತರಿದ್ದರು.