ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಭೂಮಿಪೂಜೆ : ಎಕ್ಸೆಲ್‌ನಲ್ಲಿ 3 ಕೋ.ರೂ.ವೆಚ್ಚದಲ್ಲಿ ಸ್ಥಾಪನೆ

waste
ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್‌ಪಾಲಕರಾದ ಸತೀಶ್ ಕುಮಾರ್ ಆರಿಗ ಬೊಳ್ಳೂರು ಗುತ್ತು ಹಾಗೂ ಶುಭಲತಾ ನೂತನ ಘಟಕದ ಶಂಕು ಸ್ಥಾಪನೆ ನೆರವೇರಿಸಿದರು.
Published on

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಮತ್ತು ಹಾಸ್ಟೆಲ್‌ಗಳ ತ್ಯಾಜ್ಯ ನೀರು ಹಾಗೂ ಪರಿಸರದ ಕೊಳಚೆ ನೀರಿನ ಸಂಸ್ಕರಣೆಯ ನೂತನ ವಿಸ್ತರಿತ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಪ್ರತಿದಿನ ಹತ್ತುಲಕ್ಷ ಲೀಟರ್ ನೀರಿನ ಶುದ್ಧೀಕರಣ ಸಾಮರ್ಥ್ಯವುಳ್ಳ, ಮೂರು ಕೋಟಿ ರೂ. ವೆಚ್ಚ ತಗಲುವ, ತಾಲೂಕಿನ ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇದಾಗಿದೆ. ಘಟಕದಲ್ಲಿ ಸಂಸ್ಕರಿಸಿದ ನೀರನ್ನು ಸ್ಥಳೀಯ ಕೃಷಿ ಭೂಮಿಗೆ ಬಳಸುವ ಮೂಲಕ ಕೃಷಿಗೆ ಬೆಂಬಲ ನೀಡುವ ಯೋಚನೆ ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯದ್ದಾಗಿದೆ.

ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರ ಪಾಲಕರಾದ ಸತೀಶ್ ಕುಮಾರ್ ಆರಿಗ ಬೊಳ್ಳೂರು ಗುತ್ತು ಹಾಗೂ ಶುಭಲತಾ ನೂತನ ಘಟಕದ ಶಂಕುಸ್ಥಾಪನೆ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯದರ್ಶಿ, ಪ್ರಾಂಶುಪಾಲ, ಆಡಳಿತಾಧಿಕಾರಿ, ಕ್ಯಾಂಪಸ್ ಮ್ಯಾನೇಜರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net