![Fastag]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F02%2FFastag.jpg?w=480&auto=format%2Ccompress&fit=max)
![Fastag]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F02%2FFastag.jpg?w=480&auto=format%2Ccompress&fit=max)
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಟೋಲ್ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿಸಿ ಸಮಯ ಉಳಿಸಿ ಎಂಬುದು ರಾ.ಹೆ. ಪ್ರಾಧಿಕಾರದ ಹೇಳಿಕೆ. ಆದರೆ, ಫಾಸ್ಟಾ್ಯಗ್ ವ್ಯವಸ್ಥೆ ಜಾರಿ ನಂತರವೂ ವಾಹನಗಳು ಕಾಯುವ ಸಮಯ ಹೆಚ್ಚಾಗಿದೆ.
ದೇಶದಲ್ಲಿ 1.4 ಲಕ್ಷ ಕಿ.ಮೀ. ಉದ್ದದ ರಾ.ಹೆದ್ದಾರಿಯಿದ್ದು, ಆ ಪೈಕಿ 24,996 ಕಿ.ಮೀ. ಹೆದ್ದಾರಿ ಟೋಲ್ ವ್ಯಾಪ್ತಿಗೊಳಪಟ್ಟಿದೆ. ರಾಜ್ಯ ವ್ಯಾಪ್ತಿಯಲ್ಲಿನ 3,700 ಕಿ.ಮೀ. ರಾ.ಹೆದ್ದಾರಿಗಳಲ್ಲಿ 36 ಟೋಲ್ಗಳಿವೆ. ದೇಶದಲ್ಲಿನ ಒಟ್ಟು 543 ಟೋಲ್ ಪ್ಲಾಜಾಗಳ ಪೈಕಿ 488ರಲ್ಲಿ ಟ್ರಾಫಿಕ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಇದರ ಮೂಲಕ ವಾಹನಗಳು ಟೋಲ್ಗೆ ಬರುವ ಮತ್ತು ಫಾಸ್ಟಾ್ಯಗ್ ಸ್ಕಾ್ಯನ್ ಆದ ಬಳಿಕ ಹೊರಡಲು ಎಷ್ಟು ಸಮಯ ಬೇಕಾಗಲಿದೆ ಎಂಬುದನ್ನು ಅಂದಾಜಿಸಲಾಗುತ್ತದೆ.
ಪ್ರಾಧಿಕಾರದ ಮಾಹಿತಿಯಂತೆ ನ.15ರಿಂದ ಡಿ.14ರವರೆಗೆ ಸರಾಸರಿ ಕಾಯುವ ಸಮಯ 7.44 ನಿಮಿಷವಾಗಿದೆ. ಡಿ.15ರಿಂದ ಜ.14ರವರೆಗೆ ಕಾಯುವ ಸಮಯ ಸರಾಸರಿ 9.57 ನಿಮಿಷಕ್ಕೆ ಏರಿಕೆಯಾಗಿದೆ. ಅದರಲ್ಲೂ ಡಿ.15ರಂದು ಒಂದೇ ದಿನ ಸರಾಸರಿ 10.04 ನಿಮಿಷಕ್ಕೆ ಏರಿಕೆಯಾಗಿತ್ತು. ಆ ಮೂಲಕ ಫಾಸ್ಟಾ್ಯಗ್ ವ್ಯವಸ್ಥೆ ಜಾರಿಗೆ ಆರಂಭವಾದ ನಂತರದ ದಿನಗಳಲ್ಲಿ ವಾಹನಗಳ ಕಾಯುವ ಸಮಯ ಹೆಚ್ಚಾದಂತಾಗಿದೆ.