

ಬೆಂಗಳೂರು: ಬೆಂಗಳೂರಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿರುವ ಬಿಬಿಎಂಪಿ, 5 ಕಡೆ ಟ್ರಾನ್ಸ್ರ್ ಸ್ಟೇಷನ್ಗಳ ನಿಮಿರ್ಸಿದೆ. ಆಮೂಲಕ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯನ್ನು ಸುಲಭವಾಗಿಸಲಾಗುತ್ತಿದೆ. ತ್ಯಾಜ್ಯ ವಿಂಗಡಣೆ, ದಂಡದ ಪ್ರಮಾಣ ಹೆಚ್ಚಳ, ಮಾರ್ಷಲ್ಸ್ಗಳ ನೇಮಕ, ಸಂಸ್ಕರಣಾ ಟಕಗಳ ಹೆಚ್ಚಳ ಹೀಗೆ ಹಲವು ಕ್ರಮ ಕೈಗೊಂಡರೂ ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರಕಿಲ್ಲ. ಅಲ್ಲದೆ, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿಯೂ ನಿಂತಿಲ್ಲ. ಇದೆಲ್ಲಕ್ಕೂ ಮುಕ್ತಿ ನೀಡಲು ಮುಂದಾಗಿರುವ ಬಿಬಿಎಂಪಿ, ನಗರದ 5 ಕಡೆ ಟ್ರಾನ್ಸ್ಫರ್ ಸ್ಟೇಷನ್ಗಳನ್ನು ನಿಮಿರ್ಸಿದೆ.
ಈ ಟ್ರಾನ್ಸ್ಫರ್ ಸ್ಟೇಷನ್ಗಳ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶುಕ್ರವಾರ ಆಡಳಿತಾಧಿಕಾರಿ ಗೌರವ್ ಗುಪ್ತಾ, ಆಯುಕ್ತ ಮಂಜುನಾಥಪ್ರಸಾದ್, ನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ರಾಜ್ ಖಾನ್ ರಾಧಾಕೃಷ್ಣ ವಾರ್ಡ್ನಲ್ಲಿನಟ್ರಾನ್ಸ್ಫರ್ ಸ್ಟೇಷನ್ಗೆ ಭೇಟಿ ನೀಡಿ ಅದರ ಕಾರ್ಯವಿಧಾನಗಳನ್ನು ಪರಿಶೀಲನೆ ನಡೆಸಿದರು.
ಏನಿದು ಟ್ರಾನ್ಸ್ಫರ್ ಸ್ಟೇಷನ್?: ಟ್ರಾನ್ಸ್ಫರ್ ಸ್ಟೇಷನ್ನಲ್ಲಿ ತ್ಯಾಜ್ಯ ಶೇಖರಿಸಲು ತೆಗೆದು, ಜೋಡಿಸಬಹುದಾದ ಸಣ್ಣ ಕಾಂಪ್ಯಾಕ್ಟರ್ (ಪೋರ್ಟಬಲ್) ಅಳವಡಿಸಲಾಗುತ್ತದೆ. ಆಟೋ ಟಿಪ್ಪರ್ಗಳ ಮೂಲಕ ಸಂಗ್ರಹವಾಗುವ 50 ಟನ್ ತ್ಯಾಜ್ಯವನ್ನು ಟ್ರಾನ್ಸ್ಫರ್ ಸ್ಟೇಷನ್ನಲ್ಲಿನ ಕಾಂಪ್ಯಾಕ್ಟರ್ಗೆ ಹಾಕಲಾಗುತ್ತದೆ. ಅದಾದ ನಂತರ ಕಾಂಪ್ಯಾಕ್ಟರ್ನಲ್ಲಿ ತ್ಯಾಜ್ಯವನ್ನು ಸಂಕುಚಿತ (ಕಂಪ್ರೆಸ್)ಗೊಳಿಸಲಾಗುತ್ತದೆ. ಅದರಿಂದ ತ್ಯಾಜ್ಯದಲ್ಲಿನ ಕೊಳಚೆ ನೀರು ಹೊರಬರಲಿದ್ದು, ಅದನ್ನು ಪೈಪ್ ಮೂಲಕ ಚರಂಡಿಗೆ ಬಿಡಲಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ 15 ಟನ್ ತ್ಯಾಜ್ಯ 7 ಟನ್ಗೆ ಇಳಿಯಲಿದೆ. ಅದರಿಂದ ಸುಲಭವಾಗಿ ತ್ಯಾಜ್ಯವನ್ನು ಸಾಗಿಸಬಹುದಾಗಿದೆ. ಅಲ್ಲದೆ, ಕಾಂಪ್ಯಾಕ್ಟರ್ಗಳನ್ನು ನೇರವಾಗಿ ಕಾಂಪ್ಯಾಕ್ಟರ್ ಲಾರಿಗಳಿಗೆ ಶ್ಟಿ್ ಮಾಡುವ ವ್ಯವಸ್ಥೆಯಿರುವುದರಿಂದ, ತ್ಯಾಜ್ಯವನ್ನು ಮತ್ತೆ ಹೊರತೆಗೆಯುವ ಅವಶ್ಯಕತೆಯಿಲ್ಲದಂತಾಗಲಿದೆ.
50 ಕಡೆ ಸ್ಟೇಷನ್ ನಿರ್ಮಾಣ: ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಕಡೆ ಟ್ರಾನ್ಸ್ರ್ ಸ್ಟೇಷನ್ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಆ ಪೈಕಿ 5 ಕಡೆ ಕಾಮಗಾರಿ ರ್ಪೂಣಗೊಂಡಿದ್ದು, 15 ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 30 ಕಡೆ ಜಾಗ ಗುರುತಿಸುವ ಕಾರ್ಯ ಚಾಲ್ತಿಯಲ್ಲಿದೆ.
ಖಾಸಗಿ ಸಹಭಾಗಿತ್ವ: ಟ್ರಾನ್ಸ್ಫರ್ ಸ್ಟೇಷನ್ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳನ್ನು ನಿಯೋಜಿಸಲಾಗುತ್ತದೆ. ಬಿಬಿಎಂಪಿಯಿಂದ ಸ್ಟೇಷನ್ಗಳ ನಿರ್ಮಾಣಕ್ಕಾಗುವ ಖರ್ಚಿನಲ್ಲಿ ಮೊದಲಿಗೆ ಶೇ. 50 ಹಣ ನೀಡಲಾಗುತ್ತದೆ ಮತ್ತು ಜಾಗವನ್ನು ಕೊಡಲಾಗುತ್ತದೆ. ನಂತರದ 7 ವರ್ಷ ಸ್ಟೇಷನ್ ನಿಮಿರ್ಸಿದ ಸಂಸ್ಥೆಯೇ ನಿರ್ವಹಣೆ ಮಾಡಬೇಕು. ಉಳಿದ ಶೇ. 50 ಹಣವನ್ನು 7 ವರ್ಷದ ನಿರ್ವಹಣಾ ಅವಧಿಯಲ್ಲಿ ನೀಡಲಾಗುತ್ತದೆ.
ಯೋಜನಾ ವೆಚ್ಚ: 50 ಸ್ಟೇಷನ್ಗಳ ನಿರ್ಮಾಣಕ್ಕೆ 75.99 ಕೋಟಿ ರೂ., ಒಂದಕ್ಕೆ 1.32 ಕೋಟಿ ರೂ.
7 ವರ್ಷದ ನಿರ್ವಹಣಾ ವೆಚ್ಚ: 170.2 ಕೋಟಿ ರೂ., ತಿಂಗಳಿಗೆ 4.4 ಲಕ್ಷ ರೂ.
ಅನುದಾನ: ಮುಖ್ಯಮಂತ್ರಿಗಳ ನಗರೋತ್ಥಾನ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸದ ಸಮಸ್ಯೆ ನಿವಾರಣೆಗೆ ಟ್ರಾನ್ಸ್ಫರ್ ಸ್ಟೇಷನ್ಗಳು ನೆರವಾಗಲಿವೆ. ಬ್ಲಾ$್ಯಕ್ಸ್ಪಾಟ್ಗಳ ನಿವಾರಣೆ, ತ್ಯಾಜ್ಯ ಸಾಗಿಸುವಾಗ ಉತ್ಪತ್ತಿಯಾಗುವ ತ್ಯಾಜ್ಯ ನೀರು ಸೋರಿಕೆಯಾಗುವುದನ್ನು ತಡೆಯಬಹುದು.ಎನ್.ಮಂಜುನಾಥಪ್ರಸಾದ್, ಬಿಬಿಎಂಪಿ ಆಯುಕ್ತ