ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹೆಚ್ಚು ಗೊಬ್ಬರ ಉತ್ಪಾದಿಸಲು ಸೂಚನೆ

garbage
Published on

ಬೆಂಗಳೂರು: ತ್ಯಾಜ್ಯ ಸಂಸ್ಕರಣಾ ಟಕಗಳನ್ನು ಸಮರ್ಪಕ ನಿರ್ವಹಣೆ ಮಾಡುವುದರ ಜತೆಗೆ ತ್ಯಾಜ್ಯ ಸಂಸ್ಕರಿಸಿ ಸಾವಯವ ಗೊಬ್ಬರ ಉತ್ಪಾದನೆ ಹೆಚ್ಚಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್​ಗುಪ್ತಾ ಸೂಚನೆ ನೀಡಿದ್ದಾರೆ. ದೊಡ್ಡಬಳ್ಳಾಪುರ ಬಳಿಯ ಎಂಎಸ್​ಜಿಪಿ ತ್ಯಾಜ್ಯ ಸಂಸ್ಕರಣಾ ಟಕಕ್ಕೆ ಶುಕ್ರವಾರ ಭೇಟಿ ನೀಡಿದ ಆಡಳಿತಾಧಿಕಾರಿ ಗೌರವ್​ ಗುಪ್ತಾ, ಆಯುಕ್ತ ಎನ್​.ಮಂಜುನಾಥಪ್ರಸಾದ್​, ತ್ಯಾಜ್ಯ ಸಂಸ್ಕರಣೆ, ಸಾವಯವ ಗೊಬ್ಬರ ತಯಾರಿಕೆ ಹಾಗೂ ಪ್ಯಾಕಿಂಗ್​ ವಿಧಾನವನ್ನು ಪರಿಶೀಲಿಸಿದರು.

ಹಸಿ ತ್ಯಾಜ್ಯ ಕಳುಹಿಸಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪೈಕಿ ಎಂಎಸ್​ಜಿಪಿ ಸಂಸ್ಕರಣಾ ಟಕಕ್ಕೆ ನಿತ್ಯ 450ರಿಂದ 500 ಟನ್​ ಮಿಶ್ರ ತ್ಯಾಜ್ಯ ಬರುತ್ತಿದೆ. ಮಿಶ್ರ ತ್ಯಾಜ್ಯದ ಜೊತೆಗೆ ವಿಂಗಡಣೆಯಾಗುವ ಹಸಿ ತ್ಯಾಜ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ಸಂಸ್ಕರಣಾ ಟಕಗಳ ಬಳಿ ಸ್ಥಳಿಯರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ವಾಸನೆ ಬಾರದ ಹಾಗೆ ತಂತ್ರಜ್ಞಾನ ಬಳಸಿ ಕೆಲಸ ಮಾಡಬೇಕು. ಪ್ರತಿ ಟಕವನ್ನು ಸಮಪರ್ಕವಾಗಿ ನಿರ್ವಹಣೆ ಮಾಡಿ ಹೆಚ್ಚು ಸಾವಯವ ಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಮೂರು ಮಾದರಿ ತ್ಯಾಜ್ಯ ವಿಂಗಡಣೆ: ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್​.ಮಂಜುನಾಥ ಪ್ರಸಾದ್​ ಮಾತನಾಡಿ, ಎಂಎಸ್​ಜಿಪಿ ತ್ಯಾಜ್ಯ ಸಂಸ್ಕರಣಾ ಟಕದಲ್ಲಿನ ಯಂತ್ರಗಳ ಮೂಲಕ ಹಸಿ, ಒಣ ಹಾಗೂ ಆರ್​ಡಿಎಫ್​ ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತಿದೆ. ಆರ್​ಡಿಎಫ್​ ತಾಜ್ಯವನ್ನು ಸಿಮೆಂಟ್​ ತಯಾರಿಕೆಗೆ ಬಳಸಲಾಗುತ್ತದೆ. ಹಸಿ ತ್ಯಾಜ್ಯ ಪ್ರತ್ಯೇಕವಾಗಿ ಬಂದರೆ ನೇರವಾಗಿ ಸಂಗ್ರಹಣಾ ಸ್ಥಳದಲ್ಲೇ ವಿಲೇವಾರಿ ಮಾಡಲಾಗುತ್ತದೆ. ಬಳಿಕ ಜೆಸಿಬಿ ಮೂಲಕ 45 ದಿನಗಳ ಕಾಲ ರೊಟೇಟ್​ ಮಾಡಿ ನಂತರ ಹಂತ ಹಂತವಾಗಿ ತ್ಯಾಜ್ಯವನ್ನು ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ ಎಂದು ಎಂದರು.

ಈ ವೇಳೆ ಘಟಕದಲ್ಲಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಹೆಚ್ಚು ವಾಸನೆ ಬರುವುದಿಲ್ಲ. ಮಳೆ ಅಥವಾ ಜೋರು ಗಾಳಿ ಬೀಸಿದಾಗ ಕೊಂಚ ವಾಸನೆ ಬರುತ್ತದೆ. ಈ ಟಕದಲ್ಲಿ ನಿತ್ಯ 100 ಟನ್​ ಸಾವಯವ ಗೊಬ್ಬರ ತಯಾರಿಸುತ್ತಿದ್ದು, 50 ಕೆ.ಜಿ. ಬ್ಯಾಗ್​ನಲ್ಲಿ ಪ್ಯಾಕ್​ ಮಾಡಿ ಕೃಷಿ ಇಲಾಖೆಗೆ ರವಾನೆ ಮಾಡಲಾಗುತ್ತಿದೆ. ರೈತರು ಕೂಡ ನೇರವಾಗಿ ಖರೀದಿಸಲು ಅವಕಾಶವಿದೆ ಎಂದು ಟಕದ ಮುಖ್ಯಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net