ಗಂಗೊಳ್ಳಿಯಲ್ಲಿ ತಲೆನೋವಾದ ತ್ಯಾಜ್ಯ..!

gan (3)
Published on

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆ ವಹಿಸಿಕೊಂಡಿದ್ದ ಎನ್‌ಜಿಒ ಸಂಸ್ಥೆ ಕೈಕೊಟ್ಟಿದ್ದು, ಕಳೆದ 10 ದಿನಗಳಿಂದ ತ್ಯಾಜ್ಯ ಸಂಗ್ರಹ, ವಿಲೇವಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಗಂಗೊಳ್ಳಿಯ ಬೀದಿಗಳಲ್ಲಿ, ಮನೆ, ಅಂಗಡಿ ಮುಂದೆ ತ್ಯಾಜ್ಯಗಳ ರಾಶಿ ಬಿದ್ದಿದೆ.

ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುವಾರು 4600ಕ್ಕೂ ಮಿಕ್ಕಿ ಮನೆ ಮತ್ತು ವಾಣಿಜ್ಯ ಮಳಿಗೆಗಳಿವೆ. ಈ ಪೈಕಿ 300ಕ್ಕೂ ಅಧಿಕ ಅಂಗಡಿಗಳು, ಸುವಾರು 15 ಹೊಟೇಲ್‌ಗಳು, 10ಕ್ಕೂ ಮಿಕ್ಕಿ ವಾಂಸದ ಅಂಗಡಿಗಳಿವೆ. ಕಳೆದ ನಾಲ್ಕು ವರ್ಷಗಳಿಂದ ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯ ಸುವಾರು 1300ಕ್ಕೂ ಮಿಕ್ಕಿ ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಸುತ್ತಿತ್ತು. ಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆ ಮತ್ತು ಇನ್ನಿತರ ಕೆಲ ಕಾರಣಗಳಿಂದ ಕಳೆದ ಒಂದು ವಾರದಿಂದ ತ್ಯಾಜ್ಯ ಸಂಗ್ರಹಣೆ ಸ್ಥಗಿತಗೊಂಡಿದೆ. ಇದರಿಂದ ಮನೆಗಳು, ವಾಣಿಜ್ಯ ಮಳಿಗೆಗಳ ಮುಂದೆ ತ್ಯಾಜ್ಯದ ಚೀಲ ತುಂಬಿ ತುಳುಕಾಡುತ್ತಿದೆ. ತ್ಯಾಜ್ಯ ಸಂಗ್ರಹ ಕಾರ್ಯ ಸ್ಥಗಿತಗೊಂಡಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ.

ಘಟಕದ ಸುತ್ತಲೂ ತ್ಯಾಜ್ಯ: ತ್ಯಾಜ್ಯ ವಿಲೇವಾರಿ ಟಕದಲ್ಲಿ ಅಸಮರ್ಪಕ ನಿರ್ವಹಣೆಯಿಂದ ಟಕದ ಸುತ್ತಲೂ ಬಿದ್ದಿರುವ ತ್ಯಾಜ್ಯಗಳು ಗ್ರಾಮಸ್ಥರ ಕಣ್ಣು ಕುಕ್ಕಿಸುವಂತೆ ವಾಡುತ್ತಿದೆ. ಕಳೆದ ಸುವಾರು ಒಂದು ತಿಂಗಳ ಹಿಂದೆ ಎಸ್‌ಎಲ್‌ಆರ್‌ಎಂ ಟಕದ ಸುತ್ತಲೂ ರಾಶಿ ಬಿದ್ದಿದ್ದ ಸುವಾರು 70 ಲೋಡ್ ತ್ಯಾಜ್ಯವನ್ನು ಸ್ಥಳೀಯಾಡಳಿತ ವಿಲೇವಾರಿ ವಾಡಿತ್ತು. ಅದರ ಬೆನ್ನಲ್ಲೇ ಮತ್ತೊಮ್ಮೆ ತ್ಯಾಜ್ಯ ಸಂಗ್ರಹಣ ಕಾರ್ಯ ಸ್ಥಗಿತಗೊಂಡಿರುವುದು ಸ್ಥಳೀಯಾಡಳಿಕ್ಕೆ ತಲೆನೋವಾಗಿ ಪರಿಣಮಿಸಿದೆ.

ವಿಲೇ ಘಟಕದಲ್ಲೇ ತ್ಯಾಜ್ಯ ರಾಶಿ

ಗಂಗೊಳ್ಳಿ ಮೀನುಗಾರಿಕಾ ಬಂದರು ಸಮೀಪ ಸುವಾರು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಎಸ್‌ಎಲ್‌ಆರ್‌ಎಂ ಟಕದಲ್ಲಿ ತ್ಯಾಜ್ಯದ ರಾಶಿ ಬಿದ್ದಿದೆ. ಟಕದಲ್ಲಿ ಹಸಿ ಕಸ ವಿಲೇವಾರಿಗೆ ಕಾಂಪೋಸ್ಟ್ ಗೊಬ್ಬರದ ಗುಂಡಿ ನಿರ್ವಾಣ ಸಹಿತ ಎಲ್ಲ ರೀತಿಯ ಸೌಕರ್ಯಗಳನ್ನು ಸ್ಥಳೀಯಾಡಳಿತ ವಾಡಿದೆ. ಕಾಂಪೋಸ್ಟ್ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ಅದನ್ನು ತೆಗೆಯುವ ಕೆಲಸ ನಡೆದಿಲ್ಲ. ಇದರಿಂದ ಕಳೆದ ನಾಲ್ಕೈದು ತಿಂಗಳಿನಿಂದ ಹಸಿ ತ್ಯಾಜ್ಯ ಸಂಗ್ರಹ ನಿಲ್ಲಿಸಲಾಗಿದೆ.

ತ್ಯಾಜ್ಯ ಸಂಗ್ರಹ ಕಾರ್ಯ ನಿರ್ವಹಿಸುತ್ತಿದ್ದ ಎನ್‌ಜಿಒ ಸಂಸ್ಥೆ ಏಕಾಏಕಿ ಕೆಲಸವನ್ನು ಸ್ಥಗಿತಗೊಳಿಸಿದೆ. ಇದೀಗ ಸಂಜೀವಿನಿ ಸಂದ ಮೂಲಕ ತ್ಯಾಜ್ಯ ಸಂಗ್ರಹ ಕಾರ್ಯ ಪುನರಾರಂಭಿಸಲು ಪ್ರಯತ್ನ ನಡೆಯುತ್ತಿದೆ. ತ್ಯಾಜ್ಯ ಸಂಗ್ರಹಿಸಲು ಎರಡು ವಾಹನ ಸಹಿತ ಎಸ್‌ಎಲ್‌ಆರ್‌ಎಂ ಟಕದ ಅಭಿವೃದ್ಧಿಗೆ ಸುವಾರು 35 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ. ರವಿ, ಗಂಗೊಳ್ಳಿ ಗ್ರಾಪಂ ಪಿಡಿಒ https://www.vijayavani.net/saligrama-papam-golden-jubilee-on-the-25th https://www.vijayavani.net/swarna-garuda-vahan-dedication-yatra

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net