ತ್ಯಾಜ್ಯ ವಿಲೇವಾರಿಗಿಲ್ಲ ಕ್ರಮ

09 HATTI 01
ಹಟ್ಟಿ ಪಟ್ಟಣದಲ್ಲಿ ಕೋಳಿ, ಕುರಿ ಮತ್ತು ಮೀನಿನ ತ್ಯಾಜ್ಯ ರಸ್ತೆ ಬದಿಯಲ್ಲಿ ಎಸೆದಿರುವುದು.
Published on

ಹಟ್ಟಿಚಿನ್ನದಗಣಿ: ಪಟ್ಟಣದ ಕೋಠಾ ಕ್ರಾಸ್ ಬಳಿ ಪ್ಲಾಸ್ಟಿಕ್ ಮತ್ತು ಮಾಂಸ ತ್ಯಾಜ್ಯ ಬೀಸಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇತಂಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪಟ್ಟಣದಿಂದ ಕ್ಯಾಂಪಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಹಳ್ಳ ಬದಿ ಕೆಲ ಬಾರ್‌ಶಾಫ್ ಹಾಗೂ ಇನ್ನಿತರರು ಪ್ಲಾಸ್ಟಿಕ್ ತ್ಯಾಜ್ಯ ಹಾಕುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ದುರ್ನಾತ ಬೀರುವುದರಿಂದ ಪರಿಸರ ಹಾನಿ ಹಾಗೂ ರೋಗಗಳ ಭೀತಿ ಕಾಡುತ್ತಿದೆ. ಹಳ್ಳದ ಪಕ್ಕದಲ್ಲಿ ಖಾಸಗಿ ಶಾಲೆಗಳಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಾಂಸ ತ್ಯಾಜ್ಯ ಸೇವನೆಗೆ ಬೀದಿ ನಾಯಿಗಳು ಹಿಂಡು ಬರುತ್ತಿದ್ದು, ರಸ್ತೆಯಲ್ಲಿ ಅಡ್ಡದಿಡ್ಡಿ ಓಡಾಡಿ ವಾಹನಗಳ ಸಂಚಾರಕ್ಕೆ ಕಂಟಕವಾಗಿವೆ. ಚಿನ್ನದ ಗಣಿಕಂಪನಿಯಿಂದ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬರುವ ನೌಕರರಿಗೆ ಬೀದಿ ನಾಯಿಗಳ ಕಾಟ ತಪ್ಪಿದ್ದಲ್ಲ. ಬಹಳಷ್ಟು ನೌಕರರ ದ್ವಿಚಕ್ರ ವಾಹನ ಅಪಘಾತಕ್ಕಿಡಾಗಿ ಕೈಕಾಲು ಮುರಿದುಕೊಂಡ ಉದಾಹರಣೆಗಳು ಇವೆ.

ಸಾರ್ವಜನಿಕ ರಸ್ತೆಯಲ್ಲಿ ತ್ಯಾಜ್ಯ ಎಸೆದು ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಸ್ಥಳೀಯಾಡಳಿತ ಕ್ರಮಕೈಗೊಂಡು ಮುಂದೆ ಇಂತಹ ಸಮಸ್ಯೆ ಬಾರದರೀತಿಯಲ್ಲಿ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈಗಾಗಲೇ ಹಲವು ಸಲ ಪಪಂಗೆ ತಿಳಿಸಿದರು ಪ್ರಯೋಜನವಾಗಿಲ್ಲ. ರಸ್ತೆ ಬದಿಯಲ್ಲಿ ಎಸೆದ ತ್ಯಾಜ್ಯಗಳನ್ನು ನಾಯಿಗಳು ರಸ್ತೆ ಮದ್ಯದಲ್ಲಿ ತಂದು ತಿನ್ನುತ್ತವೆ. ರಸ್ತೆಯಲ್ಲಿ ಸಂಚಾರಿಸುವಾಗ ನಾಯಿಗಳು ಅಟ್ಟಾಡಿಸಿಕೊಂಡು ಕಚ್ಚಲು ಬರುತ್ತವೆ. ಇನ್ನಾದರೂ ಪಪಂ ಅಧ್ಯಕ್ಷರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಿ, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ, ದುರ್ನಾತ ಹಾಗೂ ರೋಗ ಹರಡದಂತ್ತೆ ನೋಡಿಕೊಳ್ಳಿ. ಶ್ರೀಕಾಂತ ಅಂಗಡಿ ಸ್ಥಳಿಯ ನಿವಾಸಿ. ಮಾಂಸದ ಅಂಗಡಿ ಹಾಗೂ ಬಾರ್‌ಶಾಫ್‌ಗಳ ಮಾಲಿಕರಿಗೆ ಸೂಚನೆ ನೀಡಿ ನೋಟಿಸ್ ನೀಡುವದರ ಜತೆಗೆ ತ್ಯಾಜ್ಯ ಎಸೆದಿರುವ ಸ್ಥಳವನ್ನು ಸ್ವಚ್ಛಗೊಳಿಸಿ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಂಡಿಆರ್ ಸಂಧಾನಿ ಹಟ್ಟಿ ಪಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net