ತ್ಯಾಜ್ಯ ತೆರವುಗೊಳಿಸಿದ ಅರಣ್ಯ ಇಲಾಖೆ

ಚಿತ್ರ 4ಎಸ್ ಡಿ ಪಿ 1
ಅಯ್ಯಪ್ಪ ದೇವರ ಕಾಡುವಿನಲ್ಲಿ ತ್ಯಾಜ್ಯ ತೆರವುಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ.
Published on

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಅಮ್ಮತಿ ಹೋಬಳಿಯ ಕಣ್ಣಂಗಾಲ ಗ್ರಾಮದ ಒಂಟಿ ಅಂಗಡಿಯ ಚಾಮುಂಡಿ ಪೈಸಾರಿ ಸಮೀಪ ಇರುವ ಅಯ್ಯಪ್ಪ ದೇವರ ಕಾಡುವಿನಲ್ಲಿ ಕೆಲವು ಕಿಡಿಗೇಡಿಗಳು ತ್ಯಾಜ್ಯ ಸುರಿಯುತ್ತಿದ್ದ ಪರಿಣಾಮ ಎಲ್ಲೆಂದರಲ್ಲಿ ಕಸದ ರಾಶಿ ತಾಂಡವಾಡುತ್ತಿತ್ತು.

ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ತ್ಯಾಜ್ಯ ಸುರಿಯುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ನೆಹರು ಅವರ ಮಾರ್ಗದರ್ಶನದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಕಣ್ಣಂಗಾಲ ಗ್ರಾಮದ ಚಾಮುಂಡಿ ಪೈಸಾರಿ ಸಮೀಪದ ಅಯ್ಯಪ್ಪ ದೇವರ ಕಾಡಿಗೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿ ವಾಹನದೊಂದಿಗೆ ಶ್ರಮದಾನದ ಮೂಲಕ ತ್ಯಾಜ್ಯ ತೆರವುಗೊಳಿಸಿದರು.

ದೇವರ ಕಾಡುವಿನಲ್ಲಿ ತ್ಯಾಜ್ಯ ಸುರಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ದೇವರ ಕಾಡು ಸಂರಕ್ಷಣೆಗೆ ಸ್ಥಳೀಯರು ಸಹಕಾರ ನೀಡಬೇಕೆಂದು ವಲಯ ಅರಣ್ಯ ಅಧಿಕಾರಿ ಕಳ್ಳಿರ ಎಂ.ದೇವಯ್ಯ ಮನವಿ ಮಾಡಿದ್ದಾರೆ.

ದೇವರ ಕಾಡು ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಸೇವಾ ಕಾರ್ಯದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ, ಅರಣ್ಯ ಗಸ್ತು ಪಾಲಕರಾದ ಚಂದ್ರಶೇಖರ್, ಅರುಣಾ, ಸಿಬ್ಬಂದಿ ವಿನೋದ್, ಅಚ್ಚಯ್ಯ, ಹರೀಶ್, ಸಚಿನ್, ದರ್ಶನ್, ಪಂಚಾಯತಿಯ ಸ್ವಚ್ಛತಾ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net