ಬಿಜೆಪಿಯಲ್ಲೇ ಕಲೆಕ್ಷನ್ ಮಾಸ್ಟರ್ ಇರಲಿಲ್ಲವೇ?

Published on

ಮೈಸೂರು: ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಸುಳ್ಳು ಆರೋಪ ಹೊರಿಸಿರುವ ಮಾಜಿ ಸಂಸದ ಪ್ರತಾಪ್‌ಸಿಂಹ ಅವರಿಗೆ ಬಿಜೆಪಿಯಲ್ಲೇ ಕಲೆಕ್ಷನ್ ಮಾಸ್ಟರ್ ಇದ್ದರು ಎನ್ನುವುದು ಮರೆತಂತಿದೆ ಎಂದು ಕಾಂಗ್ರೆಸ್ ನಗರ ವಕ್ತಾರ ಎಸ್.ರಾಜೇಶ್ ಟೀಕಿಸಿದರು.

ಯಡಿಯೂರಪ್ಪ ಅವರ ಅವಧಿಯಲ್ಲಿ ಅವರ ಪುತ್ರ ಬಿ.ವೈ.ವಿಜಯೇಂದ್ರ ವರ್ಗಾವಣೆ ದಂಧೆ ನಡೆಸುತ್ತಿದ್ದದ್ದು ಎಲ್ಲರಿಗೂ ತಿಳಿದಿದೆ. ಈ ಆರೋಪ ಸ್ವತಃ ಬಸವರಾಜ ಪಾಟೀಲ ಯತ್ನಾಳ್ ಅವರೇ ಮಾಡಿದ್ದರೆಂಬುದನ್ನು ನೆನಪಿಸಿಕೊಳ್ಳಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

ಚುನಾವಣಾ ಬಾಂಡ್ ಮೂಲಕ ಅಂಬಾನಿ ಮೊದಲಾದ ಉದ್ಯಮಿಗಳಿಂದ ಸಾವಿರಾರು ಕೋಟಿ ರೂ.ಗಳನ್ನು ಪ್ರಧಾನಿ ಕಲೆಕ್ಷನ್ ಮಾಡಿದ್ದಾರೆ. ವಿಜಯೇಂದ್ರ ಅವರ ಬ್ಯಾಂಕ್ ಖಾತೆಗೆ ಆರ್‌ಟಿಜಿ ಮೂಲಕ ಅಕ್ರಮ ಹಣ ವರ್ಗಾವಣೆ ಆಗಿರುವುದು ರಾಜ್ಯದ ಜನತೆಗೆ ತಿಳಿಯದೇ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net