

ಉಡುಪಿ: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದು ವಿದ್ಯಾರ್ಥಿನಿಯ ವಿಡಿಯೋ ಮಾಡಿರುವ ಪ್ರಕರಣವನ್ನು ಎನ್.ಐ.ಎ ತನಿಖೆಗೆ ಒಪ್ಪಿಸಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.
ಶುಕ್ರವಾರ ಜಿಲ್ಲಾ ಬಿಜೆಪಿ ವತಿಯಿಂದ ಎಸ್ಪಿ ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂ ಸಂಘಟನೆಗಳು 25 ವರ್ಷಗಳಿಂದ ಜಿಹಾದಿ ನೆಟ್ ವರ್ಕ್ ಬಗ್ಗೆ ಹೇಳಿಕೆಗಳನ್ನು ನೀಡುತ್ತಿವೆ. ಅದರೆ ನಮ್ಮ ಮಾತನ್ನು ರ್ನಿಲಕ್ಷ$್ಯ ಮಾಡಲಾಗುತ್ತಿತ್ತು. ಪ್ರಸ್ತುತ ಎನ್.ಐ.ಎ ತನಿಖೆಯಲ್ಲಿ ಅನೇಕ ಅಂಶಗಳು ಬಯಲಾಗಿದೆ. ಗಂಭೀರ ವಿಷಯವನ್ನು ರ್ನಿಲಕ್ಷ$್ಯ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಮಕ್ಕಳನ್ನು ಮುಂದಿನ ದಿನಗಳಲ್ಲಿ ರಕ್ಷಣೆ ಮಾಡಲು ನಾವೇ ಬೇಕು. ಹಿಂದುಗಳ ಮುಂದಿನ ಜನಾಂಗ ಮತ್ತು ಹೆಣ್ಮಕ್ಕಳು ಸಮಸ್ಯೆ ಅದಾಗ ಕೊನೆಗೆ ರಕ್ಷಣೆ ಪಡೆದುಕೊಳ್ಳುವುದು ಬಿಜೆಪಿ ಕಚೇರಿಯಲ್ಲಿ ಹಾಗೂ ಸಂಪರಿವಾರದ ಕಚೇರಿಗಳಲ್ಲಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕೊಲ್ಲೂರಿಗೆ ಅಗಮಿಸುವ ಕೇರಳದ ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಮುಖಂಡರು ಈ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಡಿಯೋ ಪ್ರಕರಣದಲ್ಲಿ ಪೋಲಿಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರಿಕರಿಸಿರುವುದರ ಹಿಂದೆ ಪಿ.ಎಫ್.ಐ ನ ಮಹಿಳಾ ಘಟಕದ ಷಡ್ಯಂತ್ರವಿರಬಹುದು. ಟಾಯ್ಲೆಟ್ನಲ್ಲಿ ಮೊಬೈಲ್ ಇಟ್ಟವರು ಮುಂದಿನ ದಿನಗಳಲ್ಲಿ ಬಾಂಬ್ ಇಡಲು ಹಿಂದೇಟು ಹಾಕುವುದಿಲ್ಲ. ಹೀಗಾಗಿ ವಿದ್ಯಾರ್ಥಿನಿಯರ ಸಂಪರ್ಕದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ಪ್ರಕರಣಗಳನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತಿದೆ. ಉಡುಪಿಗೆ ವಿದ್ಯಾರ್ಜನೆಗಾಗಿ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಈಗ ಹೊರಜಿಲ್ಲೆಯ ವಿದ್ಯಾರ್ಥಿಗಳನ್ನು ಉಡುಪಿಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಹಿಜಾಬ್ ಗಲಾಟೆಯ ಹಿಂದೆ ಯಾರೆಲ್ಲಾ ಇದ್ದರೂ, ಯಾವ ಸಂಘಟನೆ ಇದೆ ಗೊತ್ತಿದೆ ಎಂಬುದು ಬಯಲಾಗಿದೆ. ಇದು ಸಣ್ಣ ವಿಚಾರವಾಗಿದ್ದರೇ ಕಾಲೇಜಿನವರು ವಿದ್ಯಾರ್ಥಿಗಳನ್ನು ಯಾಕೆ ಸಸ್ಪೆಂಡ್ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್ ಕುಮಾರ್ ಶೆಟ್ಟಿ, ಮುಖಂಡರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀನಿಧಿ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.