ಕರೊನಾ ಎದುರಿಸಲು ಯೋಧರು

coorona virus 4 mar 20
Published on

ಬೆಂಗಳೂರು: ರಾಜ್ಯವ್ಯಾಪಿ ನಾಗರಿಕರಿಗೆ ಕರೊನಾ ಜಾಗೃತಿ ಮೂಡಿಸಲು ‘ಕರೊನಾ ಯೋಧರು’ ಬರಲಿದ್ದು, ಇದಕ್ಕಾಗಿ ಯುದ್ಧೋಪಾದಿ ಸಿದ್ಧತೆಗಳು ನಡೆದಿವೆ. ಕರ್ನಾಟಕ ರೆಡ್​ಕ್ರಾಸ್ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದ್ದು, ರಾಜ್ಯ ಕಾರ್ವಿುಕರ ಸಂಸ್ಥೆ ವೆಚ್ಚ ಭರಿಸಲಿದೆ. ರಾಜ್ಯದಲ್ಲಿ ಒಟ್ಟು 3,000 ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು ಎಂದು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ನಾಗಣ್ಣ ಅವರಿಗೆ ಬರೆದ ಪತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್ ತಿಳಿಸಿದ್ದಾರೆ.

ಡಿಜಿಟಲ್ ಸಂವಹನದಲ್ಲಿ ಪರಿಣತಿ, ದಿನದ 24 ತಾಸು ಕರೊನಾ ವೈರಸ್ ಬಗ್ಗೆ ಸ್ಥಳೀಯ ಪರಿಸರದ ಮಾಹಿತಿ ವರದಿ ಮಾಡಲು ಸಿದ್ಧರಿರುವವರು ಸ್ವಯಂಸೇವಕರಾಗಬಹುದು. ಅಂತಹವರಿಗೆ ‘ಕರೊನಾ ಯೋಧ’ ಎಂಬ ಗುರುತಿನ ಚೀಟಿ ನೀಡಿ ಕ್ಷೇತ್ರ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಅವಕಾಶವಿರುತ್ತದೆ.

ಮಾಡಬೇಕಾದ್ದೇನು: ಆಸಕ್ತರು (Covid19.karnataka.gov.in)

ಜಾಲತಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಬಹುದು. ಜತೆಗೆ ಮಾ.19ರ ಬೆಳಗ್ಗೆ 9ರವರೆಗೆ ಆಸಕ್ತರು ಸ್ವತಃ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ಸೇವೆ ಸಂಪೂರ್ಣ ಸ್ವಯಂಪ್ರೇರಿತ ಹಾಗೂ ಅನೌಪಚಾರಿಕವಾಗಿದ್ದು, ಮೆಚ್ಚುಗೆಯ ಪ್ರಮಾಣಪತ್ರ ಹೊರತುಪಡಿಸಿ ಯಾವುದೇ ಸಂಭಾವನೆ ಒದಗಿಸುವುದಿಲ್ಲ. ಸ್ವಯಂಸೇವಕರ ಅವಧಿ 60 ದಿನಗಳದ್ದಾಗಿರುತ್ತದೆ.

ಅಗತ್ಯ ದಾಖಲೆ: ಆಧಾರ್ ಸಂಖ್ಯೆ, ಇತ್ತೀಚಿನ ಪಾಸ್​ಪೋರ್ಟ್ ಭಾವಚಿತ್ರ, ಸಮನ್ವಯದ ಜವಾಬ್ದಾರಿ ಹೊತ್ತವರು ಶಾರ್ಟ್​ಲಿಸ್ಟ್ ಮಾಡಿ ಪರಿಶೀಲಿಸುವರು. ನಂತರ ಸ್ಥಳೀಯ ಅಧಿಕಾರಿ ಕರೆ ಮಾಡಿ ಪರಿಶೀಲಿಸಿ ‘ಕರೊನಾ ಯೋಧರು’ ಗುರುತಿನ ಚೀಟಿ ನೀಡಲಿದ್ದು, ನಂತರ ಸ್ಥಳೀಯ ಅಧಿಕಾರಿಯೊಂದಿಗೆ ಕೆಲಸ ಮಾಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net