ಯೋಧರ ತ್ಯಾಗ ಯುವಜನತೆಗೆ ತಿಳಿಯಲಿ

11KUDLIGI1
ಕೂಡ್ಲಿಗಿಯಲ್ಲಿ ತಿರಂಗಾ ಯಾತ್ರೆ ಅಂಗವಾಗಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಮಂಡಲ ಅಧ್ಯಕ್ಷ ಕೆ.ನಾಗರಾಜ ಚಾಲನೆ ನೀಡಿದರು. ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಣೇಹಳ್ಳಿ ಹನುಮಂತಪ್ಪ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬಿ.ಸೂರ್ಯ ಪಾಪಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಎಂ.ಸಚಿನ್ ಕುಮಾರ್ ಇದ್ದರು.
Published on

ಕೂಡ್ಲಿಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ವೀರಯೋಧರ ಯಶೋಗಾಥೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ ಹೇಳಿದರು.

ತಿರಂಗಾ ಯಾತ್ರೆ ಅಂಗವಾಗಿ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಅನೇಕರು ವೀರ ಮರಣ ಹೊಂದಿದ್ದಾರೆ. ಈ ಬಲಿದಾನಗಳಿಂದ ನಮಗೆಲ್ಲ ಸ್ವಾತಂತ್ರೃ ಸಿಕ್ಕಿದೆ. ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ವೀರಯೋಧರ ಸಾಹಸಗಾಥೆಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕಿದೆ. ಇದರಿಂದ ಆ ಯುವ ಮನಸ್ಸುಗಳಲ್ಲಿ ದೇಶಪ್ರೇಮದ ಅರಿವು ಮೂಡಲಿದೆ ಎಂದರು.

ಪಹಲ್ಗಾಮ್ ನರಮೇಧಕ್ಕೆ ಪ್ರತಿಕಾರವಾಗಿ ಭಾರತದ ಸೈನಿಕರು ಆಪರೇಷನ್ ಸಿಂಧೂರದ ಮೂಲಕ ಶತ್ರು ರಾಷ್ಟ್ರಕ್ಕೆ ತಕ್ಕ ಶಾಸ್ತಿ ಮಾಡಿದ್ದು, ದೇಶದ ತಂಟೆಗೆ ಬಂದರೆ ಎಂಥಹ ದುಸ್ಸಾಹಸಕ್ಕೂ ಭಾರತದ ಸೈನಿಕರು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ನಮ್ಮಲ್ಲಿ ಏಕತೆ ಮತ್ತು ರಾಷ್ಟ್ರ ಪ್ರೇಮದ ಗಟ್ಟಿತನ ರೂಢಿಸಿಕೊಂಡರೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು.

ಜಿಲ್ಲಾ ಎಸ್ಸಿ ಮೋರ್ಚ್ ಪ್ರಧಾನ ಕಾರ್ಯದರ್ಶಿ ಸಾಣೇಹಳ್ಳಿ ಹನುಮಂತಪ್ಪ, ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಸೂರ್ಯ ಪಾಪಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಎಂ.ಸಚಿನ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಅಜಯ್, ಮಂಡಲ ಕಾರ್ಯದರ್ಶಿ ಎಲ್.ಪವಿತ್ರ, ಪ್ರಮುಖರಾದ ದಿನಾ ಮಂಜುನಾಥ್, ವಾಗಿಶ್ ಮೂರ್ತಿ, ಉಗ್ರೇಶ್, ಕರಿ ಬಸವರಾಜು, ಕೆ.ಕೆ.ಹಟ್ಟಿ ರಾಜು, ಕಾಶಿನಾಥ್, ಉಗ್ರಂ ಕಿಟ್ಟಿ, ಲೋಕೇಶ್, ಹನುಮಂತು, ರಾಕೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net