

ಬೆಳಗಾವಿ: ಅನಾರೋಗ್ಯದಿಂದ ನಿಧನರಾದ ಯೋಧ ಸುರೇಶ ಹಾವನೂರು (43) ಅವರ ಪಾರ್ಥಿವ ಶರೀರವನ್ನು ತ್ರಿಪುರಾದ ಅಗರ್ತಲಾದಿಂದ ಶನಿವಾರ ವಿಶೇಷ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಧನಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ ಮತ್ತು ಸೇನಾ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಬಳಿಕ ಯೋಧನ ಹುಟ್ಟೂರು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿಗೆ ರಸ್ತೆಯ ಮೂಲಕ ಪಾರ್ಥಿವ ಶರೀರ ರವಾನಿಸಲಾಯಿತು.
ತ್ರಿಪುರಾದ ಸಿಆರ್‌ಪಿಎ್ 71ನೇ ಬಟಾಲಿಯನ್‌ನಲ್ಲಿ ಕಳೆದ 25 ವರ್ಷಗಳಿಂದ ಸುರೇಶ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.