

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಸೃಷ್ಟಿಸಿರುವ ಗೊಂದಲ ಸರಿಪಡಿಸದಿದ್ದರೆ ನವಂಬರ್ 01 ರಂದು ನಗರದ ಕನ್ನಡ ಭವನದಲ್ಲಿ ಪ್ರತಿಭಟನೆ ಮಾಡಲಾಗುತ್ತದೆಂದು ಬೆಳಕು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಾಪ ಅಧ್ಯಕ್ಷ ಪರಿಷತ್ ಬೈಲ್ ನಿಯಮ ಉಲ್ಲಂಘಿಸಿ ಜಿಲ್ಲೆಯ 7 ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಆದರೆ ನೇಮಕಾತಿಯನ್ನು ಕೇಂದ್ರ ಸಮಿತಿ ರದ್ದುಗೊಳಿಸಿದ್ದರೂ ಅದೇ ಪದಾಧಿಕಾರಿಗಳನ್ನು ಮುಂದುವರೆಸಿ ಯಾವುದು ಸರಿ ಎಂಬ ಗೊಂದಲ ಸೃಷ್ಟಿಗೆ ಕಾರಣವಾಗಿದ್ದಾರೆ.
ಈ ಕುರಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಷಿಯವರನ್ನು ಭೇಟಿ ಮಾಡಿ ದೂರು ನೀಡಲಾಗಿದೆ.
ಈ ಕುರಿತು. ಸೆಪ್ಟೆಂಬರ್ 22 ರಂದು ರಾಜ್ಯಾಧ್ಯಕ್ಷರಿಂದ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿಯವರೊಂದಿಗೆ ಪತ್ರ ಬರೆದು ನೀವು ನೀಡಿರುವ ಆದೇಶಕ್ಕೆ ಮಾನ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಜಿಲ್ಲಾಧ್ಯಕ್ಷರು ಹೊಸ ಆಯ್ಕೆಯನ್ನು ರದ್ದುಗೊಳಿಸಿಲ್ಲ. ಇದು ಸಾಹಿತ್ಯ ಪರಿಷತ್ ಅಜೀವ ಸದಸ್ಯರು ಹಾಗೂ ಕನ್ನಡ ಮನಸುಗಳಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದರು.
ಸಾಹಿತ್ಯ ಪರಿಷತ್ ಬೈಲ್ ಉಲ್ಲಂಘಿಸಿ ನಿಯಯ 32/3 ಪ್ರಕಾರ ಅನುಮೋದನೆಯಿಲ್ಲದೇ ತಾಲೂಕ ಪದಾಧಿಕಾರಿಗಳು ಅಧಿಕಾರ ಪದಗ್ರಹಣ ಮಾಡುತ್ತಿರುವದು ಹಳೆ ಪದಾಧಿಕಾರಿಗಳಲ್ಲಿ ಮುಜುಗರು ಉಂಟು ಮಾಡಲು ಕಾರಣವಾಗಿದೆ. ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿಯವರು ಕನ್ನಡ ಕೆಲಸಕ್ಕೆ ಸಹಕರಿಸಬೇಕು. ತಮ್ಮಿಂದ ಆಗದೇ ಇದ್ದರೆ ರಾಜೀನಾಮೆ ನೀಡಿ ಇತರೆ ಪದಾಧಿಕಾರಿಗಳಿಂದಾದರೂ ಕನ್ನಡ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಾರುತಿ ಬಡಿಗೇರ ಇದ್ದರು.