ಶೀಘ್ರವಾಗಿ ಚುನಾವಣೆ ಸಿದ್ದತೆ ಮಾಡದಿದ್ದರೆ ಹೋರಾಟ -ಎಚ್ಚರಿಕೆ

raichur
raichur
Published on

ರಾಯಚೂರು ರಾಜ್ಯ ಸರ್ಕಾರ, ಚುನಾವಣಾ ಆಯೋಗಯು ಗ್ರಾಮ ಪಂಚಾಯಿತಿ ಚುನಾವಣಾ ಸಿದ್ದತೆಗಳನ್ನು ಪ್ರಾರಂಭಿಸದೇ ಇರುವದು ಮುಂದೂಡುವ ಲಕ್ಷಣಗಳಿದ್ದು, ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಬೀದಿಗಳಿದು ಹೋರಾಟ ಮಾಡಲಾಗುತ್ತದೆಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಸಿಂಧನೂರು ತಾಲೂಕ ಅಧ್ಯಕ್ಷ ರವಿಗೌಡ ಮಲ್ಲದಗುಡ್ಡ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕ ಮತ್ತು ಜಿಲ್ಲಾ ಪಂಚಾಯಿತಿಗಳ ಅವಧಿ ಮುಗಿದು ವರ್ಷ ಕಳೆದರೂ ಚುನಾವಣೆ ನಡೆಸುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗಧಿತ ಅವಧಿಯಲ್ಲಿ ಸರ್ಕಾರಗಳು ನಡೆಸದೇ ಸಂವಿಧಾನದ 243(ಇ) ಉಲ್ಲಂಘಿಸಿಲಾಗಿದೆ.

ಅವಧಿ ಮುಗಿದ ತಕ್ಷಣವೇ ಚುನಾವಣೆ ನಡೆಸಬೇಕಿದ್ದರೂ ಸರ್ಕಾರಗಳು ಚುನಾವಣೆಗಳು ಸ್ಥಳೀಯ ಸರ್ಕಾರಗಳಿಗೆ ಅಧಿಕಾರ ನಡೆಸದೇ ವಂಚಿಸಲಾಗುತ್ತಿದೆ. ತಾಲೂಕ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯೇ ನಡೆಯದೇ ಇರುವಾಗ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಇನ್ನೇರಡು ವರ್ಷ ಮುಂದೂಡುವ ಉದ್ದೇಶ ಸರ್ಕಾರ ಹೊಂದಿದೆ. ಗ್ರಾಮ ಪಂಚಾಯಿತಿಗಳಿಂದ ನಡೆಯಬೇಕಿರುವ ಅಭಿವೃದ್ದಿ ಕಾರ್ಯ ನಿಲ್ಲುವದರ ಜೊತೆಗೆ ಸಾವಿರಾರು ಕೊಟಿ ರೂ ಅನುದಾನ ಬಳಕೆಗೆ ಅಡ್ಡಿಯಾಗಲಿದೆ. 15 ನೇ ಹಣಕಾಸುಯೋಜನೆಯಡಿ 2962 ಬಿಡುಗಡೆಯಾಗಿರುವ ಅನುದಾನ ಮರಳಿ ಹೋಗುವ ಆತಂಕವಿದೆ ಎಂದರು.


ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಧರಗೌಡ, ಭಾಷಾಸಾಬ ಮುಕ್ಕುಂದ, ರಮೇಶ, ಶ್ರೀನಿವಾಸ ಮಲದಗುಡ್ಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net