

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ರಸ್ತೆಗಳು ಗುಂಡಿಗೊಟರುಗಳಿAದ ಕೂಡಿದ್ದು, ಕೂಡಲೇ ದುರಸ್ಥಿಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಎಪಿ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ, ಡಾಂಬರ್ ರಸ್ತೆಗಳು ಗುಣಮಟ್ಟವಿಲ್ಲದೇ ನಿರ್ಮಾಣಗೊಂಡ ಕಾರಣ ಸಾರಿಗೆ ವ್ಯವಸ್ಥೆ ಅಧೋಗತಿಗೆ ತಲುಪಿದೆ. ನಾಗರಿಕರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಲ್ಲಿ ನಗರಸಭೆ ಇಚ್ಚಾಶಕ್ತಿಯನ್ನು ಕಳೆದುಕೊಂಡು ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂದು ದೂರಿದರು.
ನಗರಸಭೆ ಆಡಳಿತ ಮಂಡಳಿಯಲ್ಲಿ ಇಚ್ಚಾನುಸಾರ ತೆರಿಗೆ ವಿಧಿಸಿ ಭ್ರಷ್ಟಚಾರಕ್ಕೆ ಸಂಪೂರ್ಣ ತೊಡಗಿಸಿಕೊಂಡ ಕಾರಣ ನಗರದ ಪ್ರಮುಖ ರಸ್ತೆಯಲ್ಲಿ ಗುಂಡಿಬಿದ್ದು ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅನನುಕೂಲವಾಗಿದೆ ಎಂದು ಆರೋಪಿಸಿದರು.
ಆರೇಳು ತಿಂಗಳ ಹಿಂದೆ ನಿರ್ಮಿಸಿದ ರಸ್ತೆ ಕಳಪೆಯಿಂದ ಕೂಡಿದೆ. ರಸ್ತೆಯಲ್ಲಿ ಆಗಿರುವ ಗುಂಡಿಗಳನ್ನು ಎರಡ್ಮೂರು ದಿನಗಳಲ್ಲಿ ಸೂಕ್ತ ನಿರ್ವಹಣೆ ಮಾಡದಿದ್ದಲ್ಲಿ ಎಎಪಿ ವತಿಯಿಂದ ಜೂನ್ ೨೪ ರಂದು ರಸ್ತೆಯಲ್ಲೇ ಕುಳಿತು ನಗರಸಭೆಯ ಗುಂಡಿಗಳನ್ನು ಮುಚ್ಚುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಸ್ತೆ ಕಾಮಗಾರಿ ನೀಡುವ ಗುತ್ತಿಗೆದಾರರಿಗೆ ಗುಣಮಟ್ಟದ ಭದ್ರತೆ ಮತ್ತು ನಿರ್ವಹಣೆ ಕಡ್ಡಾಯವಾಗಿ ಗ್ಯಾರಂಟಿ ಪಡೆಯುವ ನಂತರವೇ ಅಂತಿಮ ಬಿಲ್ಲನ್ನು ಬಿಡುಗಡೆಗೊಳಿಸಬೇಕು. ಜೊತೆಗೆ ರಸ್ತೆ ಕಾಮಗಾರಿಯನ್ನು ನುರಿತ ಇಂಜಿನಿಯರ್, ರಾಜಕೀಯ ಪಕ್ಷಗಳನ್ನೊಂಡ ಸದಸ್ಯರನ್ನು ಸಮ್ಮುಖದಲ್ಲಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ರಸ್ತೆಯಲ್ಲಿ ಕಳಪೆ ಗುಣಮಟ್ಟತೆ ಕಂಡುಬAದಲ್ಲಿ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಮತ್ತು ಅಧ್ಯಕ್ಷರೇ ಜವಾಬ್ದಾರಿ ಹೊತ್ತು ಭ್ರಷ್ಟಚಾರವನ್ನು ಬೇರುಮಟ್ಟದಿಂದ ನಿರ್ಮೂಲನೆಗೆ ಆದ್ಯತೆ ನೀಡಬೇಕು. ಇದಕ್ಕೆ ತಪ್ಪಿದರೆ ಪರಿಶೀಲನಾ ಸಮಿತಿಯು ಸರ್ಕಾರಕ್ಕೆ ದಂಡ ವಿಧಿಸುವ ವಿನೂತನ ಕಾನೂನನ್ನು ನಗರಸಭೆಯಲ್ಲಿ ತಿದ್ದುಪಡಿ ಮುಖಾಂತರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಎಪಿ ಮುಖಂಡ ಸುನೀಲ್ ಉಪಸ್ಥಿತರಿದ್ದರು.