

ಧಾರವಾಡ: ಲೋಕಸಭೆ ಚುನಾವಣೆಯ ಮತದಾನದ ದಿನದಂದು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಈಗಾಗಲೇ ಅಽಕಾರಿ, ಸಿಬ್ಬಂದಿಯನ್ನು ನೇಮಿಸಲಾಗಿದೆ. ಏ. 13ರಂದು ಬೆಳಗ್ಗೆ 10 ಗಂಟೆಗೆ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾ ಚುನಾವಣಾಽಕಾರಿ ಹಾಗೂ ಜಿಲ್ಲಾಽಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧,೬೬೦ ಮತಗಟ್ಟೆಗಳಿದ್ದು, ಕರ್ತವ್ಯ ನಿರ್ವಹಿಸಲು ೮,೭೮೨ ಅಽಕಾರಿ, ಸಿಬ್ಬಂದಿಯ ಅಗತ್ಯವಿದೆ. ಕೆಲವರು ಆರೋಗ್ಯ ಮತ್ತು ಇತರ ಕಾರಣ ನೀಡಿ ಕರ್ತವ್ಯದಿಂದ ವಿನಾಯಿತಿ ಕೇಳಿದ್ದಾರೆ. ಈ ಅರ್ಜಿಗಳನ್ನು ಚುನಾವಣಾ ಆಯೋಗದ ನಿಯಮಗಳ ಅನುಸಾರ ಪರಿಶೀಲಿಸಲಾಗುತ್ತಿದೆ.
ಚುನಾವಣಾ ಕರ್ತವ್ಯದಿಂದ ಅಽಕೃತವಾಗಿ ವಿನಾಯಿತಿ ಪಡೆಯದೆ, ತರಬೇತಿಗೆ ಗೈರಾದರೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಕಾರಿಗಳಾದ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.