

ಚಿತ್ರದುರ್ಗ: ರಸ್ತೆ ಬದಿ ಗೂಡಂಗಡಿ,ಹೋಟೆಲ್ ಸೇರಿದಂತೆ ಆಹಾರ ಮಾರಾಟ ಅಂಗಡಿಗಳಲ್ಲಿ ಶುಚಿತ್ವದ ಕೊರತೆ ಕಂಡುಬಂದರೆ,ಸಂಬಂಧಿಸಿದ ಆರೋಗ್ಯ ನಿರೀಕ್ಷಕರ ವಿರುದ್ಧವೂ ದೂರು ದಾಖಲಿಸುವಂತೆ ಎಡಿಸಿ ಬಿ.ಟಿ.ಕುಮಾರಸ್ವಾಮಿ,ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾ ರದ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಜಶೇಖರ್ ಪಾಳೆದವರ್ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತ ನಾಡಿ,ಕಳಪೆ ಹಾಗೂ ಕಲಬೆರಕೆ ಆಹಾರ ಸೇವನೆಯಿಂದ ಕ್ಯಾನ್ಸರ್‌ನಂಥ ಮಾರಣಾಂತಿಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ.ಹೋ ಟೆಲ್‌ಗಳ,ಆಹಾರ ತಯಾರಿಕಾ ಘಟಕಗಳಲ್ಲೂ ಶುಚಿತ್ವ ಹಾಗೂ ಗುಣಮಟ್ಟದ ಕೊರತೆ ಕಂಡು ಬರುತ್ತಿದೆ.
ನಗರಗಳಲ್ಲಿ ಅನುಮತಿ ಪಡೆಯದೇ ಎಲ್ಲೆಂದರಲ್ಲಿ ಗೂಡಂಗಡಿಗಳು ತಲೆ ಎತ್ತುತ್ತಿವೆ. ಆರೋಗ್ಯ ನಿರೀಕ್ಷಕರು ಇಂತಹ ಅಂಗಡಿಗಳಿಗೆ ಭೇಟಿ ನೀಡಿ, ಶುಚಿತ್ವ ಪರಿಶೀಲಿಸಿ,ದಂಡ ವಿಧಿಸಿದ್ದೀರಾ?,ಅನುಮತಿ ಇರದಿದ್ದರೂ ಜಿಲ್ಲಾಸ್ಪತ್ರೆ ಬಳಿ ಗೂಡಂಗಡಿಗಳಲ್ಲಿ ತಿಂಡಿ,ತಿನಿಸು ಮಾ ರಾಲಾಗುತ್ತಿದೆ. ತರಕಾರಿ,ಪ್ರಾವಿಜನ್ ಸ್ಟೋರ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಇವುಗಳನ್ನು ತಡೆಗಟ್ಟ ಬೇಕಾದ ಆರೋಗ್ಯ ನಿ ರೀಕ್ಷಕರು ಕಣ್ಮುಚ್ಚಿ ಕುಳಿತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.
ತಪಾಸಣೆ ವೇಳೆ ಸ್ವಚ್ಛತೆ ಇಲ್ಲದಿದ್ದರೆ ಮಾಲೀಕರನ್ನು ಮೊದಲ ಹಾಗೂ ಆರೋಗ್ಯ ನಿರೀಕ್ಷಕರನ್ನು 2ನೇ ದೋಷಿಯನ್ನಾಗಿ ದೂರು ದಾಖ ಲಿಸಬೇಕು. ಆಹಾರ ಸುರಕ್ಷತಾ ಕಾಯ್ದೆಯಡಿ ಮಾಲೀಕರ ಜತೆಗೆ ಆರೋಗ್ಯ ನಿರೀಕ್ಷಕರಿಗೂ ಒಂದು ಲಕ್ಷ ರೂ.ವರೆಗೂ ದಂಡ ವಿಧಿಸಲಾ ಗುವುದು. ಎಚ್ಚೆತ್ತು ಕೊಳ್ಳದಿದ್ದರೆ ಇಲಾಖೆ ವಿಚಾರಣೆ ಹಾಗೂ ಅಮಾನತಿಗೂ ಶಿಫಾರಸು ಮಾಡುವುದಾಗಿ ತಿಳಿಸಿದರು.
ಅನುಮತಿ ಪಡೆದ,ಪಡೆಯದ ಅಂಗಡಿ,ಹೋಟೆಲ್,ಬೇಕರಿ,ಸಿದ್ಧ ಆಹಾರ ತಯಾರಿಕೆ ಉದ್ದಿಮೆ,ಶುದ್ಧ ಕುಡಿಯುವ ನೀರು ಸರಬ ರಾಜು ಘಟಗಳ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು. ಪರವಾನಗಿ ನವೀಕರಣ ಹಾಗೂ ಪ್ರಾಣಿವಧಾಲಯ,ಚಿಕನ್, ಮಟನ್ ಹಾಗೂ ಮೀನು ಮಾರಾಟ ಅಂಗಡಿಗಳಲ್ಲಿ ಸ್ವಚ್ಛತೆ, ಜೈವಿಕ ತಾಜ್ಯಗಳ ವಿಲೇವಾರಿ ಪರಿಶೀಲಿಸ ಬೇಕೆಂದರು.
ಬಸ್‌ಸ್ಟ್ಯಾಂಡ್ ಹಾಗೂ ಬೇಕರಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ನೀರು,ಹಾಲು,ಮೊಸರು,ತಂಪು ಪಾನೀಯಗಳನ್ನು ಮಾರಾ ಟ ಮಾಡುತ್ತಾರೆ. ಹೂವಿನ ಮಾರುಕಟ್ಟೆಯಲ್ಲಿ ರೈತರಿಗೆ ಅಳತೆಯಲ್ಲಿ ಮೋಸವಾಗುತ್ತಿದೆ. ತೂಕ,ತಯಾರಿಕೆ ದಿನಾಂಕ ಹಾಗೂ ದರಗಳ ಕು ರಿತು ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ತಪ್ಪುಗಳಿದ್ದರೆ ನಿರ್ದಾಕ್ಷಿಣ್ಯಕ್ರಮಕ್ಕೆ ತಾಕೀತು ಮಾಡಿ ದರು.ಆಹಾರ ಸುರಕ್ಷತೆ,ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕೆಂದರು.
ತಾಲೂಕು ಮಟ್ಟದ ಆಹಾರ ಸುರಕ್ಷತಾಧಿಕಾರಿಗಳಾದ ಕೆ.ಒ. ಮಂಜು ನಾಥ ಹಾಗೂ ನಾಗೇಶ್,ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಕೆ.ಚನ್ನಬಸಪ್ಪ, ನಗರ ಸಭೆ ಆರೋಗ್ಯ ನಿರೀಕ್ಷರಾದ ರುಕ್ಮಿಣಿ,ಕೆ.ವಿ.ಭಾರತಿ,ಹೀನಾ ಕೌಸರ್ ಇತರರು ಇದ್ದರು.
(ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಗ್ ಶಾಟ್ ಬಳಸಿ)
--------------