ಬಸ್ ನಿಲ್ದಾಣದಲ್ಲಿ ಹೋಟೆಲ್, ಟೈಲರ್ ಅಂಗಡಿ!

Untitled design(2)
ಹಟ್ಟಿಚಿನ್ನದಗಣಿಗೆ ಸಮೀಪದ ಆನ್ವರಿ ಗ್ರಾಮದ ಬಸ್ ನಿಲ್ದಾಣವನ್ನು ಆವರಿಸಿದ ಹೋಟೆಲಂಗಡಿಗಳ ಚಿತ್ರ.
Published on

ಹಟ್ಟಿಚಿನ್ನದಗಣಿ: ಸಮೀಪದ ಆನ್ವರಿ ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಟೈಲರ್ ಅಂಗಡಿ ಹಾಗೂ ಹೋಟೆಲ್ ತರೆದಿರುವುದು ಸಾರ್ವಜನಿಕರನ್ನು ಹುಬ್ಬೇರಿಸುವಂತೆ ಮಾಡಿದೆ.

ಬಸ್ ನಿಲ್ದಾಣದಲ್ಲಿ ಅಸ್ವಚ್ಛತೆ ತಾಂಡವ

ಸರ್ಕಾರಿ ಭೂಮಿ, ರಸ್ತೆ, ಜಮೀನು ಒತ್ತುವರಿ ಮಾಡುವುದನ್ನು ಕೇಳುತ್ತವೆ. ಆದರೆ ಗ್ರಾಮದಲ್ಲಿ ಇಬ್ಬರು ಬಸ್ ನಿಲ್ದಾಣವನ್ನೆ ಅತಿಕ್ರಮಿಸಿ ಹೋಟೆಲ್ ಹಾಗೂ ಟೈಲರ್ ಅಂಗಡಿ ನಡೆಸುತ್ತಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬಸ್ ನಿಲ್ದಾಣದ ಒಂದು ಭಾಗದಲ್ಲಿ ಗುಟ್ಕಾ ಜಗಿದು ಉಗಿಯುತ್ತಿರುವುದು ಪ್ರಯಾಣಿಕರು ನರಕಯಾತನೆ ಪಡುವಂತಾಗಿದೆ.

ಹೋಟೆ ಹಾಗೂ ಟೈಲರ್ ಅಂಗಡಿದಾರರು ಆನ್ವರಿ ಗ್ರಾಪಂಗೆ ಪ್ರತಿ ವರ್ಷವೂ ಕರ ಶುಲ್ಕ ಪಾವತಿ ಮಾಡುತ್ತಾರೆ ಎನ್ನಲಾಗಿದೆ. ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿದ ಬಸ್ ನಿಲ್ದಾಣದ ಸ್ಥಳಕ್ಕೆ ಗ್ರಾಪಂ ಹೇಗೆ ಕರಪಾವತಿ ಮಾಡಿಕೊಂಡಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಬಸ್ ನಿಲ್ದಾಣವನ್ನು ಅತಿಕ್ರಮಿಸಿಕೊಂಡಿರುವುದರಿಂದ ಗ್ರಾಮದ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ತೀವ್ರ ತೊಂದರೆ ಪಡುವಂತಾಗಿದೆ. ಮಳೆ ಬಂದರೆ ಸಾಕು ನಿಲ್ಲಲು ಸ್ಥಳ ಇಲ್ಲದಂತಾಗಿದೆ. ಸಂಬಂಧಪಟ್ಟವರು ಬಸ್ ನಿಲ್ದಾಣ ಅತಿಕ್ರಮಣ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಯಲ್ಲಮ್ಮ, ದುರಗಮ್ಮ, ಹುಲಗಪ್ಪ ಸಾರ್ವಜನಿಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net