

ಕೋಲಾರ: ನಗರ ಹೊರವಲಯದ ಅರಹಳ್ಳಿ ಸಮೀಪದ ಸೋಾ, ಕುಶನ್ ಗೋದಾಮು ಹಾಗೂ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಗುರುವಾರ ಕಾಣಿಸಿಕೊಂಡ ಬೆಂಕಿಯಿಂದಾಗಿ ಗೋದಾಮು ಹಾಗೂ ಕಾರ್ಖಾನೆ ಸಂಪೂರ್ಣ ಆಹುತಿಯಾಗಿದೆ.
ಮಧ್ಯಾಹ್ನ 2ರ ಸುಮಾರಿಗೆ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದೆ. ಸೋಫಾ, ಕುಶನ್ಗಳು ಬೆಂಕಿಯ ಕೆನ್ನಾಲಿಗೆಗೆ ಸಮೀಪದಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳ ತಯಾರಿಕಾ ಕಾರ್ಖಾನೆಗೂ ಹಬ್ಬಿದ್ದು, ಮತ್ತಷ್ಟು ಜ್ವಾಲೆ ಹೆಚ್ಚಾಯಿತು. ಅಗ್ನಿಶಾಮಕ ದಳದ 2 ವಾಹನಗಳಲ್ಲಿ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರೂ ಹತೋಟಿಗೆ ತರಲು ಪರದಾಡಿದರು. ಪುನ@ 4 ವಾಹನಗಳನ್ನು ಕರೆಯಿಸಿ ಸತತ 5&-6 ಗಂಟೆಗಳಿಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಲಾಯಿತು. ಅವಡಕ್ಕೆ ಶಾರ್ಟ್ ಸಕ್ಯೂರ್ಟ್ ಕಾರಣ ಎನ್ನಲಾಗಿದೆ.