

ಇಂಡಿ: ಪಟ್ಟಣದಲ್ಲಿ ಭಾನುವಾರ ಶಾರ್ಟ್ ಸಕ್ಯೂರ್ಟ್ನಿಂದ ಗೋಡೌನ್ವೊಂದಕ್ಕೆ ಬೆಂಕಿ ತಗುಲಿ ಕೃಷಿಗೆ ಸಂಬಂಧಿಸಿದ ಅಪಾರ ಮೌಲ್ಯದ ಡ್ರಿಪ್ ಪೈಪುಗಳು, ಸ್ಪಿಂಕ್ಲರ್ ಪೈಪುಗಳು ಸುಟ್ಟು ಕರಕಲಾಗಿವೆ.
ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿ ರಿಲಯನ್ಸ್ ಪೆಟ್ರೋಪ್ ಪಂಪ್ ಹತ್ತಿರದ ಲಕ್ಷಿ$್ಮ ಶಶಿಧರ ಟೆಂಗಳೆ ಅವರ ಗೋಡೌನ್ಗೆ ಬೆಂಕಿ ತಗುಲಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.