ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ಫಾಗಿಂಗ್ ಮಾಡಿ

10-DVD-3
ದೇವದುರ್ಗದಲ್ಲಿ ಪುರಸಭೆ ವ್ಯವಸ್ಥಾಪಕ ಗಂಗಾಧರ್‌ಗೆ ನಾಗರಿಕ ವೇದಿಕೆ ಮನವಿ ಪತ್ರ ಜತೆಗೆ ಸೊಳ್ಳೆ ಪರದೆ ನೀಡಿ ಆಕ್ರೋಶ ವ್ಯಕ್ತಪಡಿಸಿತು. ಪ್ರಮುಖರಾದ ಶಿವರಾಜ, ನರಸಣ್ಣಗೌಡ ನಾಯಕ ಗಣೇಕಲ್, ಹನುಮಂತಪ್ಪ ಮನ್ನಾಪುರ, ಗುಂಡಪ್ಪ ನಾಯಕ ಇತರರಿದ್ದರು.
Published on

ದೇವದುರ್ಗ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದ್ದರೂ ನಿಯಂತ್ರಿಸುವಲ್ಲಿ ಪುರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಪುರಸಭೆ ಕಚೇರಿ ಮುಂದೆ ನಾಗರಿಕರ ವೇದಿಕೆ ಸೊಳ್ಳೆ ಪರದೆಹಿಡಿದು ಸೋಮವಾರ ವಿಭಿನ್ನ ಪ್ರತಿಭಟನೆ ನಡೆಸಿತು.

ಪಟ್ಟಣದಲ್ಲಿ ಬಹುತೇಕ ಎಲ್ಲ 23 ವಾರ್ಡ್‌ಗಳಲ್ಲಿ ಸೊಳ್ಳೆಗಳ ಹಾವಳಿ ಮಿತಿಮೀರಿದೆ. ವಿಪರೀತ ಧೂಳು, ಕಸದ ಸಮಸ್ಯೆ ನಡುವೆ ಸೊಳ್ಳೆಗಳ ಹಾವಳಿ ಜನರ ನೆಮ್ಮದಿ ಕಸಿದಿವೆ. ಇವುಗಳಿಂದ ಮಲೇರಿಯಾ, ಡೆಂಘೆ, ಚಿಕ್ಯೂನ್‌ಗುನ್ಯಾ ಸೇರಿ ಹಲವು ರೋಗಗಳು ಆವರಿಸಿವೆ. ಕಸ ವಿಲೇವಾರಿ, ಚರಂಡಿ ಹೂಳು ತೆರವು, ಸ್ವಚ್ಛತೆ ಕೈಗೊಳ್ಳುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡದೆ ಅಧಿಕಾರಿಗಳು ಹಾಗೂ ಸದಸ್ಯರು ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ದೂರಿದರು.

ಎಲ್ಲ ವಾರ್ಡ್‌ಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ವಾರಕ್ಕೊಮ್ಮೆ ಫಾಗಿಂಗ್ ಮಾಡಬೇಕು. ಸಮರ್ಪಕವಾಗಿ ನಿತ್ಯ ಕಸ ವಿಲೇವಾರಿ ಮಾಡಬೇಕು. ಚರಂಡಿ ಹೂಳು ತೆರವು ಮಾಡಬೇಕು. ನೀರು ಸಿಂಪಡಿಸುವ ಜತೆಗೆ ಸಿಸಿ ರಸ್ತೆ ನಿರ್ಮಾಣ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಪುರಸಭೆಗೆ ಬೀಗ ಜಡಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಪುರಸಭೆ ವ್ಯವಸ್ಥಾಪಕ ಗಂಗಾಧರ್‌ಗೆ ಮನವಿ ಪತ್ರದ ಜತೆಗೆ ಸೊಳ್ಳೆಪರದೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಶಿವರಾಜ, ನರಸಣ್ಣಗೌಡ ನಾಯಕ ಗಣೇಕಲ್, ಹನುಮಂತಪ್ಪ ಮನ್ನಾಪುರ, ಗುಂಡಪ್ಪ ನಾಯಕ, ಮಲ್ಲಿಕಾರ್ಜುನ್ ಖ್ಯಾತವಳ್ಳಿ, ಟಿ.ಜಯರಾಜ, ವಿಶ್ವನಾಥ್ ಬಲಿದವ್, ಮೋಹನ್ ಬಲ್ಲಿದ್, ಕ್ರಾಂತಿಕುಮಾರ್ ರಾಯಚೂರಕರ್, ಏಜಾಜ್ ಖಾನ್, ಸಮೀರ್ ನವಾಜ್, ಮೆಹಬೂಬ್, ಹನುಮೇಶ್ ನಾಯಕ ದೊರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net