ಇಂದಿನಿಂದ 7 ವಿಭಾಗಗಳ ವಾರ್ಡ್ ಸಭೆ

meetings
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ 2025-26 ನೇ ಸಾಲಿನ 7 ವಿಭಾಗಗಳ ವಾರ್ಡ್ ಸಭೆ ಅ.24ರಿಂದ ಆರಂಭವಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ತಿಳಿಸಿದ್ದಾರೆ.

ಅ.24 ರಂದು ಮಧ್ಯಾಹ್ನ 3 ಗಂಟೆಗೆ ಸುಂಟಿಕೊಪ್ಪ 3ನೇ ವಿಭಾಗದ ಸದಸ್ಯ ಎ.ಶಬೀರ್ ಅವರ ಅಧ್ಯಕ್ಷತೆಯಲ್ಲಿ ಖತೀಜ ಉಮ್ಮ ಮದರಸ ಆವರಣದಲ್ಲಿ ಸಭೆ ನಡೆಯಲಿದೆ. 27ರಂದು ಮಧ್ಯಾಹ್ನ 3 ಗಂಟೆಗೆ ಉಲುಗುಲಿ 2ನೇ ವಿಭಾಗದ ಸಭೆ ಸದಸ್ಯ ಎಂ.ಎಸ್.ಜಿನಾಸುದ್ದಿನ್ ಅವರ ಅಧ್ಯಕ್ಷತೆಯಲ್ಲಿ ಪಂಪ್‌ಹೌಸ್ ರಸ್ತೆ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. 28ರಂದು ಮಧ್ಯಾಹ್ನ 3 ಗಂಟೆಗೆ ಉಲುಗುಲಿ 3ನೇ ವಿಭಾಗದ ಸಭೆ ಅಂಬೇಡ್ಕರ್ ನಗರ ಅಂಗನವಾಡಿ ಕೇಂದ್ರದಲ್ಲಿ ಸದಸ್ಯ ಬಿ.ಎಂ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಅ.29ರಂದು ಮಧ್ಯಾಹ್ನ 3 ಗಂಟೆಗೆ ಉಲುಗುಲಿ 4ನೇ ವಿಭಾಗದ ಸಭೆ ಗದ್ದೆಹಳ್ಳ ಅಂಗನವಾಡಿ ಕೇಂದ್ರದಲ್ಲಿ ಸದಸ್ಯೆ ಸಿ.ಗೀತಾ ಅಧ್ಯಕ್ಷತೆಯಲ್ಲಿ ನಡೆಯಲಿದೆ. 30 ರಂದು ಮಧ್ಯಾಹ್ನ 3 ಗಂಟೆಗೆ ಉಲುಗುಲಿ 1ನೇ ವಿಭಾಗದ ಸಭೆ ಪನ್ಯ ಅಂಗನವಾಡಿ ಕೇಂದ್ರದಲ್ಲಿ ಸದಸ್ಯ ಕೆ.ಎಂ.ಆಲಿಕುಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. 31ರಂದು ಮಧ್ಯಾಹ್ನ 3 ಗಂಟೆಗೆ ಸುಂಟಿಕೊಪ್ಪ 1ನೇ ವಿಭಾಗದ ಸಭೆ ಅಂಬೇಡ್ಕರ್ ಭವನದಲ್ಲಿ ಸದಸ್ಯ ಐ.ಸೋಮನಾಥ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಾಗಾಗಿ ಆಯಾ ವಿಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಸ್ಯೆ, ಅಗತ್ಯ ಮೂಲ ಸೌಲಭ್ಯಗಳ ಕುರಿತು ಸಲಹೆ ಸೂಚನೆ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net