ಯುದ್ಧದಲ್ಲಿ ತಂತ್ರಜ್ಞಾನ ಬಳಕೆ

10 Sirwar 1
Published on

ಸಿರವಾರ: ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಶುಕ್ರವಾರ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಟಿಪ್ಪು ಸುಲ್ತಾನ್ ಸಂಘದಿಂದ ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯ ಹಾಜಿ ಚೌದ್ರಿ ಮಾತನಾಡಿ, ಟಿಪ್ಪು ಸುಲ್ತಾನ್ ಹೋರಾಟ ಹಾಗೂ ಆಗಿನ ದಿನಮಾನಗಳಲ್ಲೇ ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಪ್ರಪಂಚದ ಗಮನ ಸೆಳೆದಿದ್ದರು. ಟಿಪ್ಪು ಆಡಳಿತ ಮಾದರಿಯಾಗಿದೆ ಎಂದರು.

ಸಿಪಿಐ ಶಶಿಕಾಂತ್, ಪ್ರಮುಖರಾದ ಎಂ.ಮಹ್ಮದ್ ಹುಸೇನ್, ರಹೀಮ್ ಸಾಬ್, ರಫಿ ಜಂಗಿ, ಮಹ್ಮದ್ ಇಸ್ಮಾಯಿಲ್ ನಶಿಪುಡಿ, ಬಾಬು ಸಾಬ್, ವಾಹೀದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net