ಕಂಟ್ರಿ ಪಿಸ್ತೂಲ್ ವಿರುದ್ಧ ಸಮರ, ಪೊಲೀಸರಿಂದ ಮತ್ತೆ ಎರಡು ಪಿಸ್ತೂಲ್- 4 ಸಜೀವ ಗುಂಡು ಜಫ್ತಿ

KANTRI PISTOOL UMER ARREST
ಉಮೇರ್ ಬಂದೇನವಾಜ್ ಗಿರಗಾಂವ, ಆರೋಪಿ
Published on

ವಿಜಯಪುರ: ಕಂಟ್ರಿ ಪಿಸ್ತೂಲ್‌ಗಳ ವಿರುದ್ಧ ಸಮರ ಸಾರಿರುವ ಪೊಲೀಸರು ಇದೀಗ ಮತ್ತೊಂದು ಪ್ರಕರಣ ಪತ್ತೆ ಹೆಚ್ಚಿದ್ದು, ಓರ್ವನನ್ನು ಬಂಧಿಸಿ 2 ಕಂಟ್ರಿ ಪಿಸ್ತೂಲ್ ಹಾಗೂ 4 ಸಜೀವ ಗುಂಡು ಜಫ್ತು ಮಾಡಿದ್ದಾರೆ.

ಸ್ಥಳೀಯ ಕುಂಬಾರ ಗಲ್ಲಿಯ ಗ್ಯಾಂಗ್ ಬಾವಡಿ ನಿವಾಸಿ ಉಮೇರ್ ಬಂದೇನವಾಜ್ ಗಿರಗಾಂವ (23) ಬಂಧಿತ ಆರೋಪಿ. ಕಳೆದ ಹಲವು ದಿನಗಳ ಹಿಂದಷ್ಟೇ ಪೊಲೀಸರು ಒಟ್ಟು 10 ಕಂಟ್ರಿ ಪಿಸ್ತೂಲ್ ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಮತ್ತೆ ಎರಡು ಕಂಟ್ರಿ ಪಿಸ್ತೂಲ್ ವಶಪಡಿಸಿಕೊಂಡಿದ್ದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಎಎಸ್‌ಪಿಗಳಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಮಾರ್ಗದರ್ಶನ, ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್‌ಐ ಜ್ಯೋತಿ ಖೋತ ಮತ್ತಿತರ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದಿತ್ತು. ವಿಜಯಪುರ ನಗರದ ಇಂಡಿ ಬೈಪಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಉಮೇರ್‌ನನ್ನು ಬಂಧಿಸಲಾಗಿದೆ. ಈತನ ಮೇಲೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net